ಕರೊನಾ ಸಮಯದಲ್ಲಿ ನಡೆಯದ ಶಿಕ್ಷಕರ ನೇಮಕಾತಿ; ವಯೋಮಿತಿಯಲ್ಲಿ 2 ವರ್ಷ ಸಡಿಲ

Teachers
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಜಗತ್ತಿಗೇ ಬಾಧಿಸಿದ್ದ ಕರೊನಾ, ಅನೇಕರ ಉದ್ಯೋಗಾವಕಾಶಗಳನ್ನು ಕೂಡ ಕಸಿದಿತ್ತು. ಕರೊನಾ ಸಮಯದಲ್ಲಿ ಅನಿವಾರ್ಯವಾಗಿ ಅನೇಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿರಲಿಲ್ಲ. ಅದೇ ಸಾಲಿಗೆ ಶಿಕ್ಷಕರ, ಉಪನ್ಯಾಸಕರ ನೇಮಕಾತಿ ಕೂಡ ಸೇರುತ್ತದೆ.

ಕರೊನಾ ಸಮಯದಲ್ಲಿ ಶಿಕ್ಷಕರ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳದಿರುವ ಹಿನ್ನೆಲೆಯಲ್ಲಿ ಇದೀಗ ವಯೋಮಿತಿಯಲ್ಲಿ 2 ವರ್ಷಗಳನ್ನು ಸಡಿಲಗೊಳಿಸಲಾಗಿದೆ. ಒಟ್ಟು 778 ಹುದ್ದೆಗಳ ನೇಮಕಕ್ಕೆ ಇದು ಅನ್ವಯವಾಗಲಿದೆ.

ಸರ್ಕಾರ, ಶಿಕ್ಷಕರು, ಉಪನ್ಯಾಸಕರ ಹುದ್ದೆಗಳ ನೇರ ನೇಮಕಾತಿಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಸಿದ್ದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಕರ, ಉಪನ್ಯಾಸಕರಿಗೆ ಮುಂದಿನ 1 ವರ್ಷದ ಅವಧಿಯಲ್ಲಿ ನಡೆಯುವ ನೇರ ನೇಮಕಾತಿಗಳಿಗೆ ಇದು ಅನ್ವಯವಾಗಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net