

ಬಿಹಾರ: ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬುದು ಮತ್ತೆ ಸಾಕ್ಷಿಯಾಗಿದೆ. ಸಮಷ್ಠಿಪುರ ಜಿಲ್ಲೆಯಲ್ಲಿ 42 ವರ್ಷದ ಶಿಕ್ಷಕನೊಬ್ಬ, 20 ವರ್ಷ ವಯಸ್ಸಿನ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಸಿ ವಿವಾಹವಾಗಿದ್ದಾನೆ. ಇವರಿಬ್ಬರ ವಿವಾಹದ ವಿಡಿಯೋ ಇದೀಗ ಟ್ವಿಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ.
ಸಂಗೀತ್ ಕುಮಾರ್ ಎಂಬ ಶಿಕ್ಷಕ, ತನ್ನ ಕೋಚಿಂಗ್ ಸೆಂಟರ್ಗೆ ಬರುತ್ತಿದ್ದ ಶ್ವೇತ ಕುಮಾರಿ ಎಂಬ ಯುವತಿಯನ್ನು ಪ್ರೀತಿಸಿದ್ದಾನೆ. ಇದೀಗ ತನ್ನ ವಯಸ್ಸಿಗಿಂತ 22 ವರ್ಷ ಕಿರಿಯ ಹುಡುಗಿಯೊಂದಿಗೆ ಸಪ್ತಪದಿ ತುಳಿದಿದ್ದಾನೆ.
ಸಂಗೀತ್ ಕುಮಾರ್ ಎಂಬ ಶಿಕ್ಷಕನ ಬಳಿ ಯುವತಿ ಶ್ವೇತ ಕುಮಾರಿ ಇಂಗ್ಲೀಷ್ ಕೋಚಿಂಗ್ ಪಡೆಯಲು ಬರುತ್ತಿದ್ದಳು. ಈ ವೇಳೆ ಇವರಿಬ್ಬರು ಹತ್ತಿರವಾಗಿ, ಆಪ್ತವಾದ ಸ್ನೇಹ ಬೆಳೆದಿದೆ. ಸ್ನೇಹ ಮುಂದೆ ಪ್ರೀತಿಗೆ ತಿರುಗಿ, ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. 42 ವರ್ಷದ ಶಿಕ್ಷಕ ಸಂಗೀತ್ ಕುಮಾರ್ಗೆ ಈ ಹಿಂದೆ ವಿವಾಹವಾಗಿತ್ತು. ಆದರೆ ಪತ್ನಿ ಅಕಾಲಿಕ ಮರಣ ಹೊಂದಿದ್ದಳು. ಹೀಗಾಗಿ ಶಿಕ್ಷಕ ಕೆಲ ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದ ಎಂದು ವರದಿಯಾಗಿದೆ.
ಇವರಿಬ್ಬರ ಪ್ರೀತಿಯ ಬಗ್ಗೆ ಇದೀಗ ಅಲ್ಲಿನ ನೆರೆಹೊರೆಯ ಮಂದಿ ಮಾತನಾಡುತ್ತಿದ್ದು, ವಿದ್ಯಾರ್ಥಿನಿ ಶ್ವೇತಾ ಕುಮಾರಿ ರೋಸ್ಡಾ ಬಜಾರ್ನಲ್ಲಿರುವ ಸಂಗೀತ್ ಕುಮಾರ್ ಅವರ ಕೋಚಿಂಗ್ನಲ್ಲಿ ಇಂಗ್ಲೀಷ್ ಕಲಿಯಲು ಬರುತ್ತಿದ್ದಳು, ಅಲ್ಲಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಕಾನೂನು ಮಾನ್ಯತೆ ಪಡೆಯಲು, ನ್ಯಾಯಾಲಯದಿಂದ ಮದುವೆ ಪ್ರಮಾಣಪತ್ರವನ್ನೂ ಪಡೆದಿದ್ದಾರೆ ಎಂದು ಹೇಳಿರುವುದು ವರದಿಯಾಗಿದೆ. (ಏಜೆನ್ಸೀಸ್)