ಐವರು ಮಕ್ಕಳೆದುರೇ ಮಾಜಿ ಪ್ರೇಯಸಿಗೆ ಗುಂಡಿಕ್ಕಿದ; ಆನ್​ಲೈನ್​ ಕ್ಲಾಸ್​ನಲ್ಲಿ ದೃಶ್ಯ ನೋಡಿದ ಶಿಕ್ಷಕಿಗೆ ಆಘಾತ

murder
Published on

ಫ್ಲೋರಿಡಾ: ವಿಡಿಯೋ ಕಾಲ್​​ ಮೂಲಕ ಮನೆಯಿಂದಲೇ ಆನ್​ಲೈನ್​ ಕ್ಲಾಸ್​ಗೆ ಹಾಜರಾಗುವಾಗ ವಿದ್ಯಾರ್ಥಿಗಳ ಹಿನ್ನೆಲೆಯಲ್ಲಿ ಏನು ನಡೆಯುತ್ತಿದೆ ಎಂಬುದು ಸಹಜವಾಗಿಯೇ ಪಾಠ ಮಾಡುವವರಿಗೆ ಅರಿವಾಗುತ್ತದೆ. ಆದರೆ, ಈ ಶಿಕ್ಷಕಿ ಕಂಡದ್ದು ಮಾತ್ರ ಅತ್ಯಂತ ಭೀಕರ ಹಾಗೂ ಹೃದಯವಿದ್ರಾವಕ.

ಇಲ್ಲಿನ ಇಂಡಿಯಾಟೌನ್​ನಲ್ಲಿ 10 ವರ್ಷದ ವಿದ್ಯಾರ್ಥಿನಿ ಮನೆಯಿಂದ ಝೂಮ್​ ಆ್ಯಪ್​ ಮೂಲಕ ಆನ್​​ಲೈನ್​ ತರಗತಿಗೆ ಹಾಜರಾಗಿದ್ದಳು. ಹಿಂದೆ ಬಾಲಕಿಯ ತಾಯಿ 32 ವರ್ಷದ ಮಾರಿಬೆಲ್​ ರೊಸಾಡೋ ಮೋರಲ್ಸ್​ ಹಾಗೂ ಹಾಗೂ ಆಕೆಯ ಮಾಜಿ ಪ್ರಿಯಕರ 27 ವರ್ಷದ ಡೊನಾಲ್ಡ್​ ಜೆ. ವಿಲಿಯಮ್ಸ್​ ವಾಗ್ವಾದದಲ್ಲಿ ತೊಡಗಿರುವುದು ಕಂಡು ಬರುತ್ತಿತ್ತು.

ಕೆಲ ಕ್ಷಣಗಳಲ್ಲಿಯೇ ವಾಗ್ವಾದ ವಿಕೋಪಕ್ಕೆ ತಿರುಗಿ, ಇಬ್ಬರು ಬೈದಾಡಿಕೊಳ್ಳುತ್ತಿದ್ದರು. ಕೊನೆಗೆ ಬಡಿದಾಟವಾಗಿ ಮಾರ್ಪಟ್ಟಿತ್ತು. ಇದೊಂದು ಕೌಟುಂಬಿಕ ಕಲಹವೆಂದೇ ವಾರ್​ಫೀಲ್ಡ್​ ಎಲಿಮೆಂಟರಿ ಸ್ಕೂಲ್​ನ ಆ ಶಿಕ್ಷಕಿ ತಿಳಿದಿದ್ದಳು. ಹೀಗಾಗಿ ಉಳಿದವರಿಗೆ ಗೊತ್ತಾಗದಂತೆ ಆಕೆಯ ಲಿಂಕ್​ಅನ್ನು ಮ್ಯೂಟ್​ ಮಾಡಿಟ್ಟಿದ್ದಳು. ಕೆಲ ಕ್ಷಣದಲ್ಲಿಯೇ ವಿದ್ಯಾರ್ಥಿನಿ ತನ್ನೆರಡು ಕವಿಗಳನ್ನು ಮುಚ್ಚಿಕೊಂಡಿದ್ದನ್ನು ಶಿಕ್ಷಕಿ ಗಮನಿಸಿದ್ದಾಳೆ. ಬಾಲಕಿಯ ಎದುರೇ ಆಕೆಯ ತಾಯಿಯನ್ನು ನೋಡಿದರೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ.

ಬಾಲಕಿ ಮಾತ್ರವಲ್ಲದೇ, ಆಕೆಯ ಇಬ್ಬರು ಸಂಬಂಧಿ ಸೇರಿ ಒಟ್ಟು ಐದು ಅಪ್ರಾಪ್ತರು ಆ ಸಂದರ್ಭದಲ್ಲಿ ಮನೆಯಲ್ಲಿದ್ದರು. ಒಬ್ಬ ಬಾಲಕಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ ಎಂದು ಪೊಲೀಸ್​ ಅಧಿಕಾರಿ ವಿಲಿಯಮ್​ ಸ್ನಿಡರ್​ ಹೇಳಿದ್ದಾರೆ.

ಆರೋಪಿ ಡೊನಾಲ್ಡ್​ ಹಾಗೂ ಮೋರಲ್ಸ್​ ವರ್ಷದ ಹಿಂದೆಯೇ ಬೇರೆಯಾಗಿದ್ದರು. ಮನೆಗೆ ಬಂದಾಗ ನಗುತ್ತಲೇ ಮಾತನಾಡುತ್ತಿದ್ದ. ಫೇಸ್​ಬುಕ್​ನಲ್ಲಿ ಆಕೆ ಅಪ್​ಲೋಡ್​ ಮಾಡಿದ್ದ ವಿಡಿಯೋ ಬಗ್ಗೆ ಆತ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಚಾರವೇ ಜಗಳ ಆರಂಭವಾಗಿ ಮೋರಲ್ಸ್​ ಕೊಲೆಯಲ್ಲಿ ಅಂತ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net