ತರಗತಿಯೊಳಗೆ ಶಿಕ್ಷಕಿಯ ನೃತ್ಯ; Viral Video ನೋಡಿ ನೆಟ್ಟಿಗರು ಕಿಡಿ

Untitled design - 2024-11-29T192706.338
Published on

ತರಗತಿಗಳಲ್ಲಿ ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು ನೃತ್ಯ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತರಗತಿಯಲ್ಲಿ ಶಿಕ್ಷಕಿಯೊಬ್ಬರು ಡ್ಯಾನ್ಸ್​​ ಮಾಡುತ್ತಿರುವ ವಿಡಿಯೋವೊಂದು ವೈರಲ್​ (Viral Video)ಆಗುತ್ತಿದೆ.

ವೈರಲ್​ ವಿಡಯೋದಲ್ಲಿ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ತೊಡಗಿದ್ದು ಶಿಕ್ಷಕಿ ಡ್ಯಾನ್ಸ್​ ಮಾಡುತ್ತಿರುವುದನ್ನು ನೋಡಬಹುದು. ವಿದ್ಯಾರ್ಥಿಗಳು ನೋಡುತ್ತಿದ್ದರು ಶಿಕ್ಷಕಿ ತರಗತಿಯಲ್ಲಿದ್ದೇನೆ ಎಂಬುದನ್ನೇ ಮರೆತಿರುವಂತೆ ನೃತ್ಯ ಮಾಡುತ್ತಿರುವುದನ್ನು ಕಾಣಬಹುದು.

9 ಸೆಕೆಂಡ್​ಗಳಿರುವ ಈ ವಿಡಿಯೋವನ್ನು ಇದುವರೆಗೂ 15 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಅನೇಕರು ಪ್ರತಿಕ್ರಿಯಿಸಿದ್ದಾರೆ. ತರಗತಿ ದೇವಾಲಯದಂತೆ ಶಿಕ್ಷಕರು ಮಿತಿಯೊಳಗೆ ಏನನ್ನಾದರೂ ಮಾಡಬೇಕು, ವಿನೋದ ವೀಕ್ಷಿಸುತ್ತಿದ್ದಾರೆ, ಕ್ಲಾಸ್ ರೂಮ್ ಓದಲು ಇದೆ ಮೇಡಂ ಇದೆಲ್ಲ ಮಾಡುವುದಕ್ಕೆ ಅಲ್ಲ, ಅಂತಹ ವಿಷಯಗಳನ್ನು ನಿಯಂತ್ರಿಸಬೇಕು ಎಂದು ಕಾಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net