ಶಾಲೆಯಲ್ಲಿ ಪ್ರಾರ್ಥನೆ ವೇಳೆ ಕುಸಿದು ಬಿದ್ದ ಶಿಕ್ಷಕ; ಹೃದಯಾಘಾತದಿಂದ ಸಾವು..

Heart Attack
Published on

ನವದೆಹಲಿ: ಜನರು ಕುಸಿದು ಬಿದ್ದು ಸಾವಿಗೀಡಾದ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿರುವುದರಿಂದ ಕಳೆದ ಕೆಲ ದಿನಗಳಿಂದ ಟ್ವಿಟರ್​ನಲ್ಲಿ ಹಾರ್ಟ್​ ಅಟ್ಯಾಕ್ ಟ್ರೆಂಡಿಂಗ್​ನಲ್ಲಿತ್ತು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. 23 ವರ್ಷದ ಶಿಕ್ಷಕನೊಬ್ಬ ಶಾಲೆಯಲ್ಲಿ ಪ್ರಾರ್ಥನೆ ಮಾಡಿಸುವ ವೇಳೆ ಕುಸಿದು ಬಿದ್ದಿದ್ದು, ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಉತ್ತರಪ್ರದೇಶದ ಬರೇಲಿಯಲ್ಲಿ ಶನಿವಾರ ಈ ಪ್ರಕರಣ ನಡೆದಿದೆ. ಶಾಹಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್​ ನಗರದ ಜೆಕೆ ಸ್ಕೂಲ್ ಅಕಾಡೆಮಿ ಆವರಣದಲ್ಲಿ ಈ ಘಟನೆ ನಡೆದಿದೆ. ಗೋವಿಂದ್ ಎಂಬಾತ ಹೃದಯಾಘಾತದಿಂದ ಸಾವಿಗೀಡಾದ ಶಿಕ್ಷಕ.

ಶಾಲಾ ಮೈದಾನದಲ್ಲಿ ಮಕ್ಕಳಿಗೆ ಪ್ರಾರ್ಥನೆ ಮಾಡಿಸುವ ವೇಳೆ ಈತ ಕುಸಿದು ಬಿದ್ದಿದ್ದ. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೆಡಿಕಲ್ ಕಾಲೇಜೊಂದಕ್ಕೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net