ಮಹಾರಾಷ್ಟ್ರದಲ್ಲಿನ ರೈಲು ದುರಂತಕ್ಕೆ ಟೀ ಮಾರುವವನೆ ಕಾರಣ: DCM ಅಜಿತ್​ ಪವಾರ್​

dk (1) (1)
Published on

ಮಹಾರಾಷ್ಟ್ರ: ಇಲ್ಲಿನ ಜಲಾಂಗಾವ್​ ಪ್ರಾಂತ್ಯದಲ್ಲಿ ಬುಧವಾರ ಸಂಜೆ ನಡೆದ ರೈಲು ದುರಂತದಲ್ಲಿ ಈವರೆರಗೆ 13 ಪ್ರಯಾಣಿಕರ ಮೃತಪಟ್ಟಿದ್ದು, ಇದಕ್ಕೆ ಕಾರಣ ರೈಲಿನಲ್ಲಿ ಟೀ ಮಾರುವವನು ಎಂದು ರಾಜ್ಯ DCM ಅಜಿತ್​ ಪವಾರ್​ ಹೇಳಿದ್ದಾರೆ.

ಈ ಕುರಿತು ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಡಿಸಿಎಂ, ಟೀ- ಮಾರುವನು ಬೋಗಿಯಲ್ಲಿ ಬೆಂಕಿ ಬಿದ್ದಿದೆ ಎಂದು ಸುಳ್ಳು ಹೇಳಿ ವದಂತಿಯನ್ನು ಹಬ್ಬಿಸಿದ್ದಾನೆ. ಇದರಿಂದ ಮೂರು ಬೋಗಿಗಳಿಗೆ ಸುದ್ದಿ ಹಬ್ಬಿದೆ. ಈ ಹಿನ್ನೆಲೆ ಜನರು ಭಯಭಿತಗೊಂಡು ಗಾಬರಿಯಿಂದ ಪ್ರಾಣ ಉಳಿಸಿಕೊಳ್ಳಲು ಟ್ರೈನ್​​ನಿಂದ ಜಿಗಿದಿದ್ದಾರೆ.

ಕೆಳಗೆ ಜಿಗಿದ ಪ್ರಯಾಣಿಕರು ಪಕ್ಕದ ಟ್ರ್ಯಾಕ್​​ ಮೇಲೆ ನಿಂತಿದ್ದಾರೆ. ಏಕಾಏಕಿ ಜಿಗಿದ ಕಾರಣ ಇಲ್ಲಿ ಕಾಲ್ತುಳಿತ ಸಂಭಂವಿಸಿದೆ. ಅದೇ ಸಂದರ್ಭದಲ್ಲಿ ಮತ್ತೊಂದು ಟ್ರೈನ್​(ಕರ್ನಾಟಕ ಎಕ್ಸ್​ಪ್ರೆಸ್​) ಬಂದು ಪ್ರಯಾಣಿಕರ ಮೇಲೆ ಹರಿದಿದೆ. ಇದರ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದ್ದು, ನಿಖರ ಮಾಹಿತಿ ಹೊರ ಬರಲಿದೆ ಎಂದು ಡಿಸಿಎಂ ಅಜಿತ್​ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿವೆ.

ಹಲವರ ಮೃತ ದೇಹಗಳು ರೈಲು ಹರಿದ ಪರಿಣಾಮದಿಂದ ಛಿದ್ರವಾಗಿದ್ದು ಗುರುತು ಪತ್ತೆಯಾಗಿಲ್ಲ ಬಹ.ಪೊಲೀಸರು ಗುರುತು ಪತ್ತೆಗೆಗಾಗಿ ಎಲ್ಲಾ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯ ಹಿನ್ನೆಲೆ...

ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿ(Pushpak Express) ಬೆಂಕಿ ಅಂಟಿಕೊಂಡಿದೆ ಎಂಬ ವದಂತಿಯಿಂದ ಭಯಭೀತಗೊಂಡ ಪ್ರಯಾಣಿಕರು ಚಲಿಸುವ ರೈಲಿನಿಂದ ಏಕಾಏಕಿ ಕೆಳಗೆ ಧುಮಿಕಿದ್ದಾರೆ. ಹೊರಗೆ ಹಾರಿದ ಪ್ರಯಾಣಿಕ ಮೇಲೆ ಕರ್ನಾಟಕ ಎಕ್ಸ್ ಪ್ರೆಸ್‌ ರೈಲು ಹರಿದಿದ್ದು, ಒಟ್ಟು 13 ಮಂದಿ ಮೃತಪಟ್ಟಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net