

ನವದೆಹಲಿ: ಕೊವಿಡ್-19ರ ಬಿಕ್ಕಟ್ಟು ನಿರ್ವಹಣೆಗೆ ಬಿಡುಗಡೆ ಮಾಡಲಾದ 20 ಲಕ್ಷ ಕೋಟಿ ರೂಪಾಯಿ ವಿಶೇಷ ಆರ್ಥಿಕ ಪ್ಯಾಕೇಜ್ನ ಒಂದು ಭಾಗವಾಗಿ ತೆರಿಗೆ ಸುಧಾರಣೆ ಮಾಡಿದ್ದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸಕ್ತ ಹಣಕಾಸು ವರ್ಷದಲ್ಲಿ ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಅಟ್ ಸೋರ್ಸ್-ಮೂಲದಲ್ಲಿ ತೆರಿಗೆ ಕಡಿತ ) ಮತ್ತು ಟಿಸಿಎಸ್( ಟ್ಯಾಕ್ಸ್ ಕಲೆಕ್ಟೆಡ್ ಅಟ್ ಸೋರ್ಸ್-ಮೂಲದಲ್ಲಿ ತೆರಿಗೆ ಸಂಗ್ರಹ) ದರವನ್ನು ಶೇ.25ಕ್ಕೆ ಇಳಿಸಲಾಗಿದೆ. ಇದರಿಂದ 50,000 ಕೋಟಿ ರೂಪಾಯಿ ಮೌಲ್ಯದ ದ್ರವ್ಯತೆ ಬಿಡುಗಡೆಯಾಗಿ, ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಹೇಳಿದರು.
ಟಿಡಿಎಸ್ ಮತ್ತು ಟಿಸಿಎಸ್ ಇಳಿಕೆ ನಾಳೆ (ಮೇ 14)ಯಿಂದಲೇ ಅನ್ವಯ ಆಗಲಿದ್ದು, 2021ರ ಮಾರ್ಚ್ 31ರವರೆಗೂ ಇರಲಿದೆ.
ಹಾಗೆ ಪ್ರಸಕ್ತ ವರ್ಷದ ಆರ್ಥಿಕ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಅವಧಿಯನ್ನು ಜು.31ರಿಂದ ನವೆಂಬರ್ 30ಕ್ಕೆ ಮುಂದೂಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. (ಏಜೆನ್ಸೀಸ್)