ಟಿಬಿಡ್ಯಾಂ ನವದೆಹಲಿ ಪರಣಿತರ ತಂಡ

TBDAM
ತುಂಗಭದ್ರಾ ಜಲಾಶಯಕ್ಕೆ ನವದೆಹಲಿಯಿಂದ ಪರಣಿತರ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ಹೊಸಪೇಟೆ: ತುಂಗಭದ್ರಾ ಜಲಾಶಯದ ಹೊಸ ಕ್ರಸ್ಟ್ ಗೇಟ್ ಅಳವಡಿಕೆಗೆ ಹಿನ್ನೆಲೆಯಲ್ಲಿ ನವದೆಹಲಿಯಿಂದ ಪರಣಿತರ ತಂಡ ಟಿ.ಬಿ.ಡ್ಯಾಮ್‌ಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಟಿಬಿಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ನವದೆಹಲಿಯಿಂದ ಪ್ರಾಧಿಕಾರದ ಅಧ್ಯಕ್ಷ ಅನಿಲ್ ಜೈನ್ ನೇತೃತ್ವದಲ್ಲಿ ಸಿಡಬ್ಲುಸಿ ಮುಖ್ಯ ಎಂಜಿನಿಯರ್ ಎನ್.ಮುಖರ್ಜಿ, ಅಣೆಕಟ್ಟು ಸುರಕ್ಷತಾ ಸಂಸ್ಥೆ ಬೆಂಗಳೂರಿನ ಮುಖ್ಯ ಎಂಜಿನಿಯರ್ ಜೆ.ಶ್ರೀನಾಥ್, ಟಿಬಿ ಬೋರ್ಡ್ ಅಧ್ಯಕ್ಷ ಎಸ್.ಎನ್.ಪಾಂಡೆ ಅವರ ತಂಡ ಎರಡು ದಿನಗಳ ಕಾಲ ಜಲಾಶಯದ ಕ್ರಸ್ಟ್ ಗೇಟ್ ಸದೃಢತೆ, ಸಾಮರ್ಥ್ಯದ ಕುರಿತು ಅಧ್ಯಯನ ನಡೆಸಲಿದ್ದಾರೆ.

ಟಿಬಿ ಬೋರ್ಡ್ ಕಾರ್ಯದರ್ಶಿ ಓಆರ್ ಕೆ ರೆಡ್ಡಿ ಸೇರಿದಂತೆ ಮಂಡಳಿಯ ಹಿರಿಯ ಅಧಿಕಾರಿಗಳೊಂದಿಗೆ ಮೊದಲ ದಿನ ಸಭೆ ನಡೆಸಿದೆ. ಬಳಿಕ ಕ್ರಸ್ಟ್ ಗೇಟ್ ಒಳಗೆ ಇಳಿದು ಪರಿಶೀಲನೆ ನಡೆಸಿದ್ದಾರೆ. ಡಿ.08ರ ಭಾನುವಾರ ಕೂಡ ಪರಣಿತರ ತಂಡ ಜಲಾಶಯದ ಕ್ರಸ್ಟ್ ಗೇಟ್ ಗಳನ್ನು ಪರಿಶೀಲನೆ ನಡೆಸಲಿದೆ. ವರದಿ ನೀಡಿದ ಬಳಿಕ ಟಿಬಿ ಬೋರ್ಡ್ ನಿಂದ ಟೆಂಡರ್ ಪ್ರಕ್ರಿಯೆ ಸೇರಿದಂತೆ ಗೇಟ್ ಅಳವಡಿಕೆಗೆ ಮುಂದಾಗಲಿದೆ.

ಟಿಬಿ ಡ್ಯಾಮ್‌ನ ಎಂಜಿನಿಯರ್‌ಗಳಾದ ಜ್ಞಾನೇಶ್ವರ್, ರವಿಚಂದ್ರ, ಮುನಿರಾಬಾದ್ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net