

ಹೊಸಪೇಟೆ: ಟಿಬಿಡ್ಯಾಂ 19 ನೇ ಕ್ರಸ್ಟ್ ಗೇಟ್ ದುರಂತದಿಂದ ಕಂಗ್ರಾಲಾಗಿದ್ದಾದ ರೈತರ ಆತಂಕ ದೂರವಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳು ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿದ ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಒಂದು ವಾರದ ಹಿಂದೆ ಈ ಗೇಟ್ ಕಿತ್ತು ಹೋಗಿ ರೈತರಲ್ಲಿ ಆತಂಕ ಮೂಡಿತು. ತಜ್ಞರ ಸಲಹೆಯಂತೆ ಕಾರ್ಯನಿರ್ವಹಿಸಿದ ಕಾಮಿರ್ಕರು ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಸ್ಟಾಪ್ ಲಾಗ್ ಗೇಟ್ ಅಳವಡಿಕೆಯಲ್ಲಿ ಯಶಸ್ವಿ ಕಂಡಿದ್ದಾರೆ.
ರಾಜ್ಯದ ಜಲಾಶಯಗಳಲ್ಲಿ ಇದೊಂದು ಪ್ರಮುಖ ಡ್ಯಾಂ. ದುರಂತದಿಂಸ ಜಲಾಶಯದಿಂದ ಹೊರಗಡೆ ಅಪಾರ ಪ್ರಮಾಣದ ನೀರು ಹೊರಗಡೆ ಹೋಗಿದೆ. ಇದರಿಂದ ಕೃಷಿಕರು ಆತಂಕಗೊಂಡಿದ್ದರು. ಈಗ ಆ ಈಗ ಆತಂಕ ದೂರವಾಗಿದೆ, ಸದ್ಯ ರೈತರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.