ತೆರಿಗೆ ಪಾವತಿಸದ ಬಸ್​ ಜಪ್ತಿ

rto
Published on

ಈ ಹಿಂದಿನ ತೆರಿಗೆ ಬಾಕಿ ಹಾಗೂ ಕಳೆದೊಂದು ವರ್ಷದಿಂದ ತೆರಿಗೆ ಪಾವತಿಸದೆ ಉಳಿಸಿಕೊಂಡಿರುವುದು ಸೇರಿ ಬಸ್​ ಮಾಲೀಕರು ಇದೀಗ ಒಟ್ಟಾರೆ 8.5 ಲಕ್ಷ ರೂ.ಗೂ ಹೆಚ್ಚಿನ ತೆರಿಗೆ ಪಾವತಿಸಬೇಕಿದೆ. ಈ ಕುರಿತು ಬಸ್​ ಮಾಲೀಕರಿಗೆ ನೋಟಿಸ್​ ನೀಡಲಾಗಿದ್ದು, ಬಾಕಿ ತೆರಿಗೆ ಮತ್ತು ದಂಡ ಪಾವತಿಸಿ ಬಸ್​ ಪಡೆಯುವಂತೆ ಯಶವಂತಪುರ ಆರ್​ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.

8.5 ಲಕ್ಷ ತೆರಿಗೆ ಬಾಕಿ:

ರಾಜಸ್ಥಾನ ನೋಂದಣಿಯ ಮಹದೇವ ಹೆಸರಿನ ಬಸ್​ಗೆ ಯಶವಂತಪುರ ಸಾರಿಗೆ ಅಧಿಕಾರಿಗಳು 1.42 ಲಕ್ಷ ರೂ. ತೆರಿಗೆ ಪಾವತಿಸುವಂತೆ ಕಳೆದ ವರ್ಷ ನೋಟಿಸ್​ ನೀಡಿದ್ದರು. ಆದರೆ, ತೆರಿಗೆ ಪಾವತಿಸದ ಬಸ್​ ಮಾಲೀಕ, ನಗರದೊಳಗೆ ಬಂದರೆ ಬಸ್​ ಜಪ್ತಿ ಮಾಡಲಾಗುತ್ತದೆ ಎಂದು ತಿಳಿದು ಪ್ರತ್ಯೇಕ ಬಸ್​ ಮೂಲಕ ಬೆಂಗಳೂರಿನಿಂದ ನೆಲಮಂಗಲಕ್ಕೆ ಪ್ರಯಾಣಿಕರನ್ನು ಕರೆದೊಯ್ದು ಅಲ್ಲಿಂದ ಜೋಧ್​ಪುರಕ್ಕೆ ಸೇವೆ ನೀಡಲಾರಂಭಿಸಿದ್ದರು. ಈ ಕುರಿತು ವಿಷಯ ತಿಳಿದ ಯಶವಂಪುರ ಆರ್​ಟಿಒ ಕಚೇರಿ ಮೋಟಾರು ವಾಹನ ನಿರೀಕ್ಷಕ ರಾಜಣ್ಣ ಮತ್ತು ಎಂ.ಎನ್​. ಸುಧಾಕರ್​ ನೇತೃತ್ವದ ತಂಡ ಬುಧವಾರ ನೆಲಮಂಗಲದ ಬಳಿಯ ಹೋಟೆಲ್​ ಒಂದರ ಮುಂದೆ ನಿಂತಿದ್ದ ಬಸ್​ ಅನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.

ಬೆಂಗಳೂರು: ಮೋಟಾರು ವಾಹನ ತೆರಿಗೆ ವಂಚಿಸುವುದಕ್ಕಾಗಿ ನಗರ ಪ್ರವೇಶಿಸದೆ ಹೊರವಲಯದಿಂದಲೇ ಜೋಧ್​ಪುರಕ್ಕೆ ಸೇವೆ ನೀಡುತ್ತಿದ್ದ ಖಾಸಗಿ ಬಸ್​ ಒಂದನ್ನು ಯಶವಂತಪುರ ಆರ್​ಟಿಒ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net