ನಗರಪಾಲಿಕೆಯಲ್ಲಿ ತೆರಿಗೆ ವಂಚನೆ ಬಯಲು

Published on

ಹಾಸನ: ನಗರಸಭೆ, ಮಹಾ ನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದ ನಂತರ ಮೊದಲ ಬಾರಿಗೆ ಬ್ಯಾಂಕ್‌ನ ನಕಲಿ ಸೀಲ್ ಉಪಯೋಗಿಸಿ ತೆರಿಗೆ ವಂಚನೆ ಮಾಡಿರುವುದು ಬಯಲಾಗಿದೆ.

ಈ ಸಂಬಂಧ ಆಯುಕ್ತ ಆರ್.ಕೃಷ್ಣಮೂರ್ತಿ ಅವರು ನಗರ ಪೊಲೀಸ್ ಠಾಣೆಗೆ ನೌಕರನೊಬ್ಬನ ವಿರುದ್ಧ ದೂರು ನೀಡಿದ್ದಾರೆ.

ಮೇ 19 ರಿಂದ ಜೂನ್ 30 ರ ವರೆಗೆ ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.16, ಸರ್ವೇ ನಂ. 27/12 ರಲ್ಲಿ ನ 3. 1/2 ಗುಂಟೆ ಪ್ರದೇಶ, ಮಾವಿನಹಳ್ಳಿ ಹಾಸನ ಮತ್ತು ವಾರ್ಡ್ ನಂ. 30 ರಲ್ಲಿನ ಸರ್ವೇ ನಂ 250/2 ರಲ್ಲಿನ 0.1 ಗುಂಟೆ ಪ್ರದೇಶ ವಾರ್ಡ್ ನಂ. 30 ರಲ್ಲಿ ಸರ್ವೇ ನಂ. 238/17 ರಲ್ಲಿ, ನ 0.01 ಗುಂಟೆ ಪ್ರದೇಶ, ವಾರ್ಡ್ ನಂ 30 ರಲ್ಲಿನ ಸರ್ವೇ ನಂ 250/7 ರಲ್ಲಿ, ಸ 0.01 ಗುಂಟೆ ಪ್ರದೇಶದ ವಾರಸುದಾರರು ಮಹಾನಗರ ಪಾಲಿಕೆಗೆ ಕಟ್ಟಬೇಕಾಗಿರುವ ಮನೆ ಕಂದಾಯ, ನಿವೇಶನ ಕಂದಾಯ, ಅಭಿವೃದ್ಧಿ ಶುಲ್ಕ, ಘನ ತಾಜ್ಯ ತೆರಿಗೆಗಳನ್ನು ಮಹಾನಗರ ಪಾಲಿಕೆಯ ಆಕ್ಸಿಸ್ ಬ್ಯಾಂಕ್ ನ ಖಾತೆಗೆ ಹಣ ಸಂದಾಯ ಮಾಡಿಲ್ಲ. ಬದಲಿಗೆ ಆಕ್ಸಿಸ್ ಬ್ಯಾಂಕಿನ ನಕಲಿ ಮುದ್ರೆಯನ್ನು ತಯಾರಿಸಿ ಚಲನ್‌ಗಳಿಗೆ ಹಣ ಸಂದಾಯ ಸೀಲು ಹಾಕಿ, ಪಾಲಿಕೆ ತೆರಿಗೆಯನ್ನು ಕಟ್ಟದೇ ವಂಚಿಸಿ, ಮಹಾ ನಗರ ಪಾಲಿಕೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ವಂಚಿಸಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಮೇರೆಗೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net