ಪ್ರಧಾನಿ ಮೋದಿ ಜತೆಗಿನ ಪರೀಕ್ಷಾ ಪೆ ಚರ್ಚಾಗೆ ತಾರಿವಾಳದ ಬಾಲಕಿ

Taravala Girl
Published on

ಬಾಗಲಕೋಟೆ: ಸಣ್ಣ ಹಳ್ಳಿಯ ಸರ್ಕಾರಿ ಶಾಲೆಯ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ಜತೆ ದೆಹಲಿಯಲ್ಲಿ ‘ಪರೀಕ್ಷಾ ಪೆ ಚರ್ಚಾ’ದಲ್ಲಿ ಭಾಗವಹಿಸುವ ಅದೃಷ್ಟ ಒದಗಿಬಂದಿದೆ.

ಜಿಲ್ಲೆಯ ಹುನಗುಂದ ತಾಲೂಕಿನ ತಾರಿವಾಳ ಗ್ರಾಮದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಪ್ರಧಾನ ಮಂತ್ರಿಗಳು ಜ. 20ರಂದು ನಡೆಸುವ ಸಂವಾದಕ್ಕೆ ಆಯ್ಕೆ ಆಗಿದ್ದಾಳೆ. ಬಾಲಕಿ ಗ್ರಾಮದ ಪಕ್ಕದಲ್ಲಿ ಇರುವ ಜಂಬಲದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ.

ಜ.16 ರಂದು ಬೆಂಗಳೂರಿಗೆ ತೆರಳಿ ವರದಿ ಮಾಡಿಕೊಳ್ಳುವಂತೆ ಇ ಮೇಲ್ ಬಂದಿದ್ದು, ಇದೀಗ ಶಾಲೆಯ ಮುಖ್ಯೋಪಾಧ್ಯಾಯರು ಬಾಲಕಿ ಬಗ್ಗೆ ಮಾಹಿತಿ ಒಳಗೊಂಡ ಅರ್ಜಿಯನ್ನು ಭರ್ತಿ ಮಾಡಿ ಕಳುಹಿಸುವಂತೆ ರಾಜ್ಯ ಸಮಗ್ರ ಶಿಕ್ಷಣದ ಕಾರ್ಯಕ್ರಮಾಧಿಕಾರಿ ರವಿಕುಮಾರ ವಿ.ಆರ್. ಇ ಮೇಲ್ ಮಾಡಿದ್ದಾರೆ.

ಮೋದಿ ಅವರನ್ನು ನೋಡುವುದೇ ನಮಗೆಲ್ಲ ಖುಷಿ. ಅಂತಹದ್ದರಲ್ಲಿ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು, ಜೀವನದಲ್ಲಿ ಮರೆಯಲಾಗದ್ದು. ಆ ಕ್ಷಣಕ್ಕಾಗಿ ಕಾಯುತ್ತಿದ್ದೇನೆ. | ಪೂರ್ಣಿಮಾ ನಾಶಿ ಸಂವಾದಕ್ಕೆ ಆಯ್ಕೆಯಾದ ಬಾಲಕಿ ಸರ್ಕಾರಿ ಶಾಲೆಯ ಬಾಲಕಿ ಪ್ರಬಂಧ ಬರೆದು ಪ್ರಧಾನಮಂತ್ರಿಗಳ ಸಂವಾದದಲ್ಲಿ ಭಾಗವಹಿಸಲು ಅವಕಾಶ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಇದು ಹೆಮ್ಮೆಯ ವಿಚಾರ. ಜಿಲ್ಲೆಯ ವಿದ್ಯಾರ್ಥಿಗಳು ಕಾರ್ಯಕ್ರಮ ವೀಕ್ಷಣೆ ಮಾಡಲು ಅಗತ್ಯ ಸಿದ್ಧತೆ ಮಾಡಲಾಗುವುದು. | ಶ್ರೀಶೈಲ ಬಿರಾದಾರ ಡಿಡಿಪಿಐ ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net