ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಎಲ್ಲ ರೀತಿಯ ಕ್ರಮಕ್ಕೂ ಸೇನೆ ತಯಾರಿದೆ; ನೂತನ ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರಾವಣೆ

NARVANE
Published on

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಉಪಾಯಗಳಿವೆ. ಅಲ್ಲದೆ ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದು ನೂತನ ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರಾವಣೆ ತಿಳಿಸಿದ್ದಾರೆ.

ಖಾಸಗಿ ಚಾನಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನರಾವಣೆ, ನಮ್ಮ ಸೇನಾ ಪಡೆಗಳನ್ನು ಜಮ್ಮು ಮತ್ತು ಕಾಶ್ಮೀರ ಸೇರಿ ಗಡಿಯಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಮತ್ತು ಅಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ನಮ್ಮಲ್ಲಿ ವಿವಿಧ ಯೋಜನೆಗಳಿವೆ. ಅಗತ್ಯವಿದ್ದರೆ, ಆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬಹುದು. ನಾವು ಮಾಡಬೇಕಾದ ಯಾವುದೇ ಕೆಲಸವನ್ನು ನಾವು ಯಶಸ್ವಿಯಾಗಿ ನಿರ್ವಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಾಕಿಸ್ತಾನದ ಬಗ್ಗೆ ಕಠಿಣ ನಿಲುವು ಹೊಂದಿರುವ ನರಾವಣೆ, ಪರಿಸ್ಥಿತಿ ಬಂದರೆ ಭಯೋತ್ಪಾದನೆ ವಿರುದ್ಧ ಎಂತಹ ನೀತಿ ಅನುಸರಿಸಲು ನಾವು ಸಿದ್ಧ ಎಂದರು.

ಸದ್ಯಕ್ಕೆ, ಆಕ್ರಮಣಗಳು ಅಥವಾ ಒಳನುಸುಳುವಿಕೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದ ನರಾವಣೆ, ನಾವು ವಿವಿಧ ಪ್ರದೇಶಗಳಲ್ಲಿ ಮತ್ತು ಸಂಕಷ್ಟದ ಪರಿಸ್ಥಿತಿಗಳಲ್ಲಿ ಹೆಚ್ಚಿನ ಜಾಗರೂಕರಾಗಿರಬೇಕು. ಇದು ನಮಗೆ ನಿಜವಾದ ಚಾಲೆಂಜ್​ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net