

Tanushree Dutta : ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿದ್ದ ನಟಿ ತನುಶ್ರೀ ದತ್ತಾ ತಮ್ಮ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿದೆ. ದಯವಿಟ್ಟು ಯಾರಾದರೂ ಬಂದು ಸಹಾಯ ಮಾಡಿ ತುಂಬಾ ದುಃಖದಿಂದ ಅಳುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ವೀಡಿಯೊ ಈಗ ಚರ್ಚೆಯ ವಿಷಯವಾಗಿದೆ.
ವೀಡಿಯೋದಲ್ಲಿ ತನುಶ್ರೀ ಅವರು ದುಃಖಿತಳಾಗಿದ್ದು, ನಾನು ಚೆನ್ನಾಗಿಲ್ಲ. ನಿರಂತರ ಒತ್ತಡದಿಂದಾಗಿ ತಮ್ಮ ಆರೋಗ್ಯ ಗಮನಾರ್ಹವಾಗಿ ಹದಗೆಟ್ಟಿದೆ. ತ್ತ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಮನೆ ನೆಟ್ಟಗೆ ಇಡಲು ಸಾಧ್ಯವಾಗುತ್ತಿಲ್ಲ. ಮನೆಗೆಲೆಸದವರನ್ನು ಕರೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರು ಮನೆಗೆಲಸದವರನ್ನು ಬುಟ್ಟಿಗೆ ಹಾಕಿಕೊಂಡು ನನ್ನ ವಿರುದ್ಧ ಬಳಸುತ್ತಿದ್ದಾರೆ. ಈ ರೀತಿಯ ಕೆಟ್ಟ ಅನುಭವ ನನಗೆ ಆಗಿದೆ. ಇಷ್ಟೇ ಅಲ್ಲ ಮನೆಗೆಲೆಸದವರು ಮನೆಯಿಂದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನನ್ನ ಮನೆಯಲ್ಲೇ ನಾನು ಕಿರುಕುಳ, ಸಂಕಷ್ಟ ಅನುಭವಿಸುತ್ತಿದ್ದೇನೆ. ನನಗೆ ಯಾರಾದರೂ ಸಹಾಯ ಮಾಡಿ ಎಂದು ತನುಶ್ರಿ ದತ್ತಾ ಗೋಗೆರೆದಿದ್ದಾರೆ.
ನನ್ನ ಮನೆಯಲ್ಲೇ ನನಗೆ ನೆಮ್ಮದಿ ಇಲ್ಲ. ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ನೋವು ಅನುಭವಿಸುತ್ತಿದ್ದೇನೆ.ನೋವು ತಾಳಲಾರದೆ ನಾನು ಪೊಲೀಸರಿಗೆ ಕರೆ ಮಾಡಿದ್ದೆ. ಪೊಲೀಸರು ಆಗಮಿಸಿ ವಿಚಾರಿಸಿದ್ದಾನೆ. ನಾಳೆ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾನೆ. ನನ್ನ ಆರೋಗ್ಯ ಸರಿಯಿಲ್ಲ. ಆರೋಗ್ಯ ಹದಗೆಟ್ಟಿರುವ ಕಾರಣ ನಾಳೆ ಅಥವಾ ನಾಡಿದ್ದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತೇನೆ. ಕಳೆದ ನಾಲ್ಕೈದು ವರ್ಷಗಳಿಂದ ನನಗೆ ಕೊಟ್ಟಿರು ಹಿಂಸೆ ಅಷ್ಟಿಟ್ಟಲ್ಲ ಎಂದು ತನುಶ್ರಿ ದತ್ತಾ ಕಣ್ಣೀರಿಡುತ್ತಾ ಹೇಳಿದ್ದಾರೆ.
2018 ರಲ್ಲಿ, #MeToo ಆಂದೋಲನದ ಭಾಗವಾಗಿ, ಅವರು ಪ್ರಸಿದ್ಧ ನಟ ನಾನಾ ಪಾಟೇಕರ್ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿದರು. ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಪಾಟೇಕರ್‌ಗೆ ಕ್ಲೀನ್ ಚಿಟ್ ಸಿಕ್ಕಿತು. ಈಗ, ಅವರು ಮನೆಯಲ್ಲಿ ಹೆಚ್ಚು ಕಿರುಕುಳ ನೀಡಿದ್ದಾರೆ ಎಂದು ಹೇಳುತ್ತಾರೆ.
ತನುಶ್ರೀ ದತ್ತಾ 2004 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಯೂನಿವರ್ಸ್ ಗೆದ್ದರು. ಆದರೆ ಆಶಿಕ್ ಬನಾಯಾ ಅಪ್ನೆ ಹಾಡಿನ ಮೂಲಕ ಅವರು ಸಾಕಷ್ಟು ಮನ್ನಣೆ ಗಳಿಸಿದರು. 2005 ರಲ್ಲಿ ತೆಲುಗಿನಲ್ಲಿ 'ವೀರಭದ್ರ' ಎಂಬ ಚಿತ್ರವನ್ನು ಸಹ ಅವರು ಮಾಡಿದರು. ಇವುಗಳಲ್ಲದೆ, ಅವರು 2013 ರವರೆಗೆ ಹಿಂದಿಯಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದರು ಮತ್ತು ನಂತರ ಸಂಪೂರ್ಣವಾಗಿ ಚಲನಚಿತ್ರಗಳಿಂದ ದೂರ ಉಳಿದರು.