ಕೆ.ಆರ್.ನಗರದಲ್ಲಿ ತಂಪೆರೆದ ಮಳೆರಾಯ

03 KRN-3
ಕೆ.ಆರ್.ನಗರ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಯ ನೋಟ.
Published on

ಕೆ.ಆರ್.ನಗರ: ಹಲವು ದಿನಗಳಿಂದ ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಧರೆಗೆ ಶುಕ್ರವಾರ ಸಂಜೆ ತಾಲೂಕಿನಾದ್ಯಂತ ಮಳೆರಾಯ ತಂಪೆರೆಯುವ ಮೂಲಕ ಜನರಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ.

ಬೇಸಿಗೆಯ ಬಿಸಿಲಿನ ತಾಪಕ್ಕೆ ಜನ-ಜಾನುವಾರುಗಳನ್ನು ಬಳಲಿ ಹೈರಾಣಾಗಿದ್ದರು. ಬಿಸಿಲಿನ ತಾಪ, ಬಿಸಿ ಗಾಳಿಯಿಂದಾಗಿ ಜನ ಪರದಾಡುವಂತಾಗಿತ್ತು. ಅಲ್ಲದೆ ಇತಿಹಾಸದಲ್ಲಿ ಉಷ್ಣಾಂಶ ಇದೇ ಮೊದಲು ದಾಖಲಾಗುವಂತೆ ಬಿಸಿಲಿನ ತೀವ್ರತೆ ಇತ್ತು.

ಮಳೆಗಾಲ ಪ್ರಾರಂಭವಾಗಿ ಅನೇಕ ದಿನಗಳೇ ಆಗಬೇಕಾಗಿದ್ದರೂ ಮಳೆರಾಯ ಮುನಿಸುಕೊಂಡಿದ್ದರಿಂದ ದೀರ್ಘಕಾಲದವರೆಗೆ ಬೇಸಿಗೆ ಮುಂದುವರಿಯುತ್ತಲ್ಲದೆ ಈ ಬಾರಿಯೂ ನಿಗದಿತ ಅವಧಿಗೆ ಮಳೆ ಆಗದೆ ರೈತರು ಕಂಗಾಲಾಗಿದ್ದರು.

ಕೆಲವು ದಿನಗಳ ಹಿಂದೆ ತಾಲೂಕಿನ ಅಕ್ಕಪಕ್ಕದ ತಾಲೂಕುಗಳಲ್ಲಿ ಅಲ್ಲಲ್ಲಿ ಮಳೆ ಸುರಿದಿರುವುದು ಕಂಡುಬಂದಿದ್ದರೂ ಇಲ್ಲಿಯವರೆಗೆ ಕೆ.ಆರ್.ನಗರ ತಾಲೂಕಿನಲ್ಲಿ ಮಳೆ ಬಿದ್ದಿರಲಿಲ್ಲ. ಆದರೆ ಶುಕ್ರವಾರ ಬಿದ್ದ ಬಿರುಗಾಳಿ ಸಹಿತ ಸಾಮಾನ್ಯ ಮಳೆಗೆ ಇಳೆ ತಂಪಾಗಿದ್ದಲ್ಲದೆ ಮರ ಗಿಡಗಳು ಅಲ್ಲಲ್ಲಿ ಬಿರುಗಾಳಿಗೆ ಉರುಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net