

ತಮಿಳುನಾಡು: (Video Viral) ನಡುರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಮುಂದಾದ ಮಗಳ ಕಾಲಿಗೆ ಬಿದ್ದು, ನಮ್ಮನ್ನ ಬಿಟ್ ಹೋಗ್ಬೇಡ ಮಗಳೇ ಎಂದು ಕೈ ಮುಗಿದು ತಂದೆ ಕೇಳಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತಮಿಳುನಾಡಿನಲ್ಲಿ ಯುವತಿಯೊಬ್ಬಳು ನಡು ರಾತ್ರಿಯಲ್ಲಿ ಪ್ರಿಯಕರನೊಂದಿಗೆ ಓಡಿ ಹೋಗಲು ಯತ್ನಿಸಿದ್ದಾಳೆ. ಆ ಸಂದರ್ಭದಲ್ಲಿ ಅಸಹಾಯಕ ತಂದೆ ಮಗಳ ಕಾಲಿಗೆ ಬಿದ್ದು, ದಯವಿಟ್ಟು ನಮ್ಮನ್ನು ಬಿಟ್ ಹೋಗ್ಬೇಡ ಮಗಳೇ ಎಂದು ಗೋಗರೆದಿದ್ದಾರೆ. ಈ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋವನ್ನು UttarandhraNow ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ಮನಕಲಕುವ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ತಮಿಳುನಾಡಿನಲ್ಲಿ ನಡೆದ ಘಟನೆಯ ಈ ವಿಡಿಯೋವನ್ನು ಪರಿಶೀಲಿಸಿದಾಗ ಇದು ನೈಜ ಘಟನೆಯಲ್ಲ ಬದಲಿಗೆ ಇದೊಂದು ಶಾರ್ಟ್ ಫಿಲ್ಮ್ ಎಂಬುದು ತಿಳಿದು ಬಂದಿದೆ.