ಮತ್ತೊಮ್ಮೆ 10 ವಿದೇಯಕ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ: ರಾಜ್ಯಪಾಲರ ವಿರುದ್ಧ ಸ್ಟಾಲಿನ್ ವಾಗ್ದಾಳಿ ನಡೆಸಿದ್ದೇಕೆ?

tn111111
Published on

Tamil Nadu assembly today unanimously passed the 10 bills

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ಶನಿವಾರ 10 ವಿಧೇಯಕಗಳನ್ನು ಅವಿರೋಧವಾಗಿ ಅಂಗೀಕರಿಸಲಾಯಿತು. ಆದರೆ ರಾಜ್ಯಪಾಲ ಆರ್‌.ಎನ್. ರವಿ ಅವರು ಯಾವುದೇ ಕಾರಣ ನೀಡದೆ ವಾಪಸ್ ಕಳುಹಿಸಿದ್ದ ಬಿಲ್‌ಗಳನ್ನು ಪುನಶ್ಚೇತನಗೊಳಿಸಲು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನಿರ್ಣಯ ಮಂಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

2020 ಮತ್ತು 2023ರಲ್ಲಿ ತಲಾ 2 ಮಸೂದೆಗಳನ್ನು ಸದನವು ಅಂಗೀಕರಿಸಿದ್ದರೆ, ಇತರ ಆರು ಮಸೂದೆಗಳನ್ನು ಕಳೆದ ವರ್ಷ ಅಂಗೀಕರಿಸಲಾಯಿತು. ರಾಜ್ಯ ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳನ್ನು ಕುಲಪತಿಗಳ ಸ್ಥಾನಕ್ಕೆ ತರುವ ಮೂಲಕ ರಾಜ್ಯಪಾಲರ ಅಧಿಕಾರವನ್ನು ಹಿಡಿದಿಡುವ ಗುರಿಯನ್ನು ಮಸೂದೆಗಳು ಹೊಂದಿವೆ.

ಇದೇ ಸಂದರ್ಭದಲ್ಲಿ ರವಿ ವಿರುದ್ಧ ವಾಗ್ದಾಳಿ ನಡೆಸಿದ ಸ್ಟಾಲಿನ್, ಯಾವುದೇ ಕಾರಣವಿಲ್ಲದೆ ಒಪ್ಪಿಗೆಯನ್ನು ತಡೆಹಿಡಿಯುವುದು ಸ್ವೀಕಾರಾರ್ಹವಲ್ಲ ಎಂದು ವಿಧಾನಸಭೆಯಲ್ಲಿ ಹೇಳಿದರು.

"ಅವರು ತಮ್ಮ ವೈಯಕ್ತಿಕ ಆಸೆ ಮತ್ತು ಅಭಿಮಾನಗಳಿಂದ ಬಿಲ್‌ಗಳನ್ನು ಹಿಂದಿರುಗಿಸಿದ್ದಾರೆ... ಒಪ್ಪಿಗೆ ನೀಡದಿರುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ಜನವಿರೋಧಿ" ಎಂದು ಸ್ಟಾಲಿನ್ ಹೇಳಿದರು.

ವಿಧಾನಸಭೆಯಲ್ಲಿ ಮತ್ತೆ ಮಸೂದೆಗಳನ್ನು ಅಂಗೀಕರಿಸಿ ಕಳುಹಿಸಿದರೆ ರಾಜ್ಯಪಾಲರು ತಡೆಹಿಡಿಯಲು ಸಾಧ್ಯವಿಲ್ಲ. ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳನ್ನು ರಾಜ್ಯಪಾಲರ ಮೂಲಕ ಕೇಂದ್ರದಿಂದ ಗುರಿಯಾಗಿಸಲಾಗುತ್ತಿದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಡಿಎಂಕೆ ಸರ್ಕಾರ ಮತ್ತು ತಮಿಳುನಾಡು ರಾಜ್ಯಪಾಲರ ನಡುವೆ ವಾಗ್ವಾದ ನಡೆದಿತ್ತು. ಸ್ಟಾಲಿನ್​ ನೇತೃತ್ವದ ಸರ್ಕಾರ ಕಳೂಹಿಸಿದ ಮಸೂದೆಗಳನ್ನು ಪರಿಗಣನೆ ರಾಜ್ಯಪಾಲರು ನಿರ್ಲಕ್ಷ್ಯವಹಿಸಿದ್ದರು. ಇದರ ವಿರುದ್ಧ ಸರ್ಕಾರ ನ.10 ರಂದು ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ರಾಜ್ಯಪಾಲರ ವಿಳಂಬದ ಬಗ್ಗೆ "ಗಂಭೀರ ಕಳವಳ" ವ್ಯಕ್ತಪಡಿಸಿತ್ತು. ಈ ನಡುವೆ ರಾಜ್ಯಪಾಲರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಕೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net