ತಮಿಳು ನಟ ಪ್ರದೀಪ್ ತಲೆಗೆ ಪೆಟ್ಟಾಗಿ ಮೃತ್ಯು

pradeep
Published on

ಚೆನ್ನೈ: ತೇಗಿಡಿ ಮತ್ತು ಹೇ ಸಿನಾಮಿಕಾ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದಿದ್ದ ನಟ ಪ್ರದೀಪ್ ಕೆ. ವಿಜಯನ್ ಅವರು ಬುಧವಾರ (ಜೂನ್ 12) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.

ಚೆನ್ನೈನ ತಮ್ಮ ನಿವಾಸದ ಸ್ನಾನಗೃಹದಲ್ಲಿ ಪ್ರದೀಪ್​ ತಲೆಗೆ ಪೆಟ್ಟಾಗಿದ್ದು, ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ನಟನ ಸಾವಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

ವರದಿಗಳ ಪ್ರಕಾರ, ಪ್ರದೀಪ್ ವಿಜಯನ್​ ಮೊಬೈಲ್​ ಮೂಲಕ ಸ್ನೇಹಿತನಿಗೆ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಆದರೆ ಅವರ ಎಲ್ಲಾ ಪ್ರಯತ್ನ ವಿಫಲವಾಗಿದೆ. ಸ್ನೇಹಿತ ಮೊಬೈಲ್​ ಅನ್ನು ನೋಡಿದಾಗ ಕರೆ ಮಾಡಿರುವುದು ಅರಿವಿಗೆ ಬಂದಿದ್ದು, ನಟನ ಮನೆಗೆ ದಾವಿಸಿ ಬಂದಿದ್ದಾನೆ. ಆದರೆ ಆತ ಹಲವಾರು ಬಾರಿ ಬಡಿದರೂ ಬಾಗಿಲು ತೆರೆದಿಲ್ಲ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪೊಲೀಸರು ಬಾಗಿಲು ಒಡೆದು ನೋಡಿದಾಗ ನಟ ಮೃತಪಟ್ಟಿರುವುದು ಕಂಡುಬಂದಿದೆ. ಪ್ರದೀಪ್ ಇತ್ತೀಚೆಗೆ ಉಸಿರಾಟದ ತೊಂದರೆ ಮತ್ತು ತಲೆತಿರುಗುವಿಕೆಯಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರದೀಪ್ ಅವರ ಹಠಾತ್ ಸಾವಿನ ಸುದ್ದಿ ಅವರ ಅನುಯಾಯಿಗಳು ಹಾಗೂ ಗಣ್ಯರನ್ನು ದಿಗ್ಭ್ರಮೆಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net