

ಗಲ್ಲಿ ಬಾಯ್ ನಟ ವಿಜಯ್ ವರ್ಮಾ ಮತ್ತು ಬಾಹುಬಲಿ ತಾರೆ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಹಬ್ಬಿದ್ದವು. 2013ರ ಹೊಸ ವರ್ಷದ ಮುನ್ನಾ ದಿನದ ಸಂಭ್ರಮಾಚರಣೆಯಲ್ಲಿ ಗೋವಾದಲ್ಲಿ ಇಬ್ಬರು ನಟರು ಕಿಸ್ ಕೊಟ್ಟಿರುವ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. ಆದ್ರೆ ವಿಜಯ್ ವರ್ಮಾ ಹಾಗೂ ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿರುವ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇವರು ಒಟ್ಟಾಗಿ ಸುತ್ತಾಡುತ್ತಾರೆ.
ತಮನ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಸಮುದ್ರ ತೀರದ ಫೋಟೋಗಳನ್ನು ಹಂಚಿಕೊಂಡಿದ್ದರು. ಇಬ್ಈಬರೂ ಕೆಲ ದಿನಗಳ ಹಿಂದೆ ಮಾಲ್ಡೀವ್ಸ್ಗೆ ತೆರಳಿದ್ದರು. ಟ್ರಿಪ್ ಮುಗಿಸಿ ಈ ಜೋಡಿ ಮುಂಬೈಗೆ ಆಗಮಿಸಿದೆ. ಈ ವೇಳೆ ಪಾಪರಾಜಿಗಳು ಕೇಳಿದ ಪ್ರಶ್ನೆ ವಿಜಯ್ ವರ್ಮಾ ಅವರ ಸಿಟ್ಟಿಗೆ ಕಾರಣವಾಗಿದೆ.
ವಿಜಯ್ ವರ್ಮಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಫೋಟೋ-ವಿಡಿಯೋ ಕ್ಲಿಕ್ಕಿಸಲು ಮುಂದಾದ ಪಾಪರಾಜಿಗಳು,
‘ಹೇಗಿತ್ತು ಸರ್ ಟ್ರಿಪ್’ ಎಂದು ವಿಜಯ್ ವರ್ಮಾ ಅವರನ್ನು ಕೇಳಲಾಯಿತು. ‘ಚೆನ್ನಾಗಿತ್ತು’ ಎಂದು ಕೂಲ್ ಆಗಿಯೇ ಉತ್ತರಿಸಿದರು ವಿಜಯ್. ಬಳಿಕ, ‘ಮಾಲ್ಡೀವ್ಸ್ ಸಮುದ್ರ ತೀರದ ಮಜವನ್ನು ಪಡೆದು ಬಂದಿರೇ’ ಎಂದು ಓರ್ವ ಪಾಪರಾಜಿ ಕೇಳಿದರು. ಇದಕ್ಕೆ ಉತ್ತರಿಸಿದ ವಿಜಯ್ ವರ್ಮಾ, ‘ಈ ರೀತಿ ನೀವು ಮಾತನಾಡುವಂತಿಲ್ಲ’ ಎಂದು ನೇರವಾಗಿಯೇ ಹೇಳಿದ್ದಾರೆ. ಈ ವೇಳೆ ಅವರು ಕೊಂಚ ಗರಂ ಆದಂತೆ ಕಂಡುಬಂತು.
ನಟಿ ತಮನ್ನಾ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಯಾರ ಜೊತೆಗೂ ಮಾತಿಗೆ ಸಿಕ್ಕಿಲ್ಲ. ಅವರು ನೇರವಾಗಿ ಕಾರು ಹತ್ತಿ ತೆರಳಿದ್ದಾರೆ.