ಬಿಜೆಪಿ, ಕಾಂಗ್ರೆಸ್ ನಡುವೆ ಆತ್ಮಹತ್ಯೆ ಪ್ರಕರಣದ ವಾಕ್ಸಮರ | Congress party duel stance

BJP Congress
Published on

ಬೆಂಗಳೂರು: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿರುವುದು ಆಡಳಿತ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಪರಸ್ಪರ ವಾಗ್ದಾಳಿ ನಿರಂತರವಾಗಿ ಮುಂದುವರಿದಿದೆ.

ಈ ಪ್ರಕರಣದ ಎ್ಐಆರ್ ದಾಖಲಿಸುವಲ್ಲಿ ಪೊಲೀಸರು ಪ್ರಭಾವಕ್ಕೆ ಒಳಗಾಗಿದ್ದಾರೆ. ಸಿಬಿಐ ತನಿಖೆ ಸೂಕ್ತವೆಂದು ಬಿಜೆಪಿ ಪಟ್ಟು ಹಿಡಿದಿದ್ದು, ಬೆಂಗಳೂರು ನಂತರ ಮಡಿಕೇರಿಯಲ್ಲಿ ಹೋರಾಟ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮುಗಿಬಿದ್ದಿದೆ.

ಸಾವಿನಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದು, ಪ್ರತಿಪಕ್ಷ ನಾಯಕರದು ತಾರ್ಕಿಕ ಅಂತ್ಯವಿಲ್ಲದ ಹೋರಾಟವಾಗಿದೆ. ಪೊಲೀಸರು ಕಾನೂನು ರೀತ್ಯ ಕ್ರಮಕೈಗೊಳ್ಳುತ್ತಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಗುತ್ತಿಗೆದಾರ ಸಚಿನ್ ಪಾಂಚಾಳ್, ಬೆಳಗಾವಿ ತಹಸೀಲ್ ಕಚೇರಿ ನೌಕರ, ಪಿಎಸ್‌ಐ ಪರಶುರಾಮ ಆತ್ಮಹತ್ಯೆ ಪ್ರಕರಣಗಳಲ್ಲಿ ಇದೇ ರೀತಿ ಹೋರಾಟ ಮಾಡಿದ್ದರು. ನಂತರ ಏನಾಯಿತು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮರು ಪ್ರಶ್ನಿಸಿ, ಹಿಟ್ ಅಂಡ್ ರನ್ ಬಿಜೆಪಿಗೆ ಹೊಸದಲ್ಲವೆಂದು ತಿವಿದಿದ್ದಾರೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಡೆತ್ ನೋಟ್‌ನಲ್ಲಿ ಶಾಸಕರ ಹೆಸರುಗಳಿದ್ದರೂ ಎ್ಐಆರ್‌ನಲ್ಲಿ ಬಿಡಲಾಗಿದೆ ಎಂದು ಬಿಜೆಪಿಗರು ಹೇಳುತ್ತಿದ್ದು, ಎಲ್ಲವನ್ನೂ ಪರಿಶೀಲಿಸುತ್ತೇವೆ. ತನಿಖೆ ಮಾಡುವಲ್ಲಿ ಪೊಲೀಸರು ಸಮರ್ಥರಿದ್ದಾರೆ.

ಲೋಪಗಳಾಗಿದ್ದರೆ ತನಿಖೆ ವೇಳೆ ಗೊತ್ತಾಗಲಿದೆ. ಪ್ರಕರಣವನ್ನು ಸಿಬಿಐ ಕೊಡುವ ಅಗತ್ಯವಂತೂ ಕಾಣಿಸುತ್ತಿಲ್ಲವೆಂದು ಬಿಜೆಪಿ ಬೇಡಿಕೆಯನ್ನು ಖಡಾಖಂಡಿತವಾಗಿ ತಳ್ಳಿಹಾಕಿದರು.

ಬಿಜೆಪಿ ನಾಯಕರ ಗುಡುಗು

ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾರ್ಯಕರ್ತರ ದೌರ್ಜನ್ಯ ನಡೆಸಲಾಗುತ್ತಿದ್ದು, ಇಂತಹ ಗೊಡ್ಡು ಬೆದರಿಕೆ ತಂತ್ರಗಳಿಗೆ ಬಿಜೆಪಿ ಕಾರ್ಯಕರ್ತರು ಬೆದರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗುಡುಗಿದ್ದಾರೆ.

ಈಶ್ವರಪ್ಪ ಸಚಿವರಾಗಿದ್ದಾಗ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ನಡೆದುಕೊಂಡಿದ್ದು ಹೇಗೆ ? ಸಾವಿನಲ್ಲಿ ರಾಜಕಾರಣ ಮಾಡಿದವರು ಯಾರು ? ಎಂಬುದು ಗೊತ್ತಿದೆ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಚುಚ್ಚಿದರು.

ಆಗ ಡೆತ್‌ನೋಟ್ ೈನಲ್ ಎಂದವರು ಈಗ ಉಲ್ಟಾ ಹೊಡೆಯುತ್ತಿದ್ದಾರೆ. ಕಾಂಗ್ರೆಸ್‌ನ ದ್ವಂದ್ವ ನಿಲುವು ಜನರಿಗೆ ಅರ್ಥವಾಗಿದೆ. ವಾಟ್ಸಪ್ ಗ್ರೂಪ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಥವಾ ಶಾಸಕರ ಬಗ್ಗೆ ಟೀಕೆ-ಟಿಪ್ಪಣಿ ಮಾಡಿದವರ ವಿರುದ್ಧ ದೂರು ದಾಖಲಿಸಲಾಗುತ್ತಿದೆ.

ಇದು ದೊಡ್ಡ ದಂಧೆಯಾಗಿ ಬೆಳೆದಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರೂ ದಾವೆ ಹೂಡುತ್ತಾರೆ ಎಂದು ಆರ್.ಅಶೋಕ್ ಕೆಂಡಕಾರಿದರು. ಎ್ಐಆರ್‌ನಲ್ಲಿ ಶಾಸಕರಿಬ್ಬರ ಹೆಸರುಗಳನ್ನು ಬಿಟ್ಟಿರುವ ಬಗ್ಗೆ ಕೋರ್ಟ್‌ನಲ್ಲಿ ಕಾನೂನು ಸಮರ ನಡೆಸುತ್ತೇವೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net