ಅಫ್ಘಾನಿಸ್ತಾನದಲ್ಲಿ ಮುಂದುವರಿದ ತಾಲಿಬಾನ್ ಅಟ್ಟಹಾಸ

Taliban
Published on

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ತಾಲಿಬಾನ್ ಹಿಡಿತ ಬಿಗಿಯಾಗುತ್ತಿದ್ದು ದೇಶದ ಉತ್ತರದಲ್ಲಿ ಇನ್ನೂ ಎರಡು ನಗರಗಳು ಉಗ್ರರ ವಶವಾಗಿವೆ. ಪ್ರಾಂತೀಯ ರಾಜಧಾನಿ ಕುಂಡುಝå್ ನಗರವನ್ನು ಹಿಡಿತಕ್ಕೆ ಪಡೆಯುವ ಮೂಲಕ ಮೂರು ದಿನಗಳಲ್ಲಿ ಮೂರು ನಗರಗಳನ್ನು ತಾಲಿಬಾನ್ ವಶಕ್ಕೆ ಪಡೆದಂತಾಗಿದೆ. ಆದರೆ ಕುಂಡುಝå್ ಪತನ, ಮೇ ತಿಂಗಳಲ್ಲಿ ದಾಳಿ ಆರಂಭಿಸಿದಾಗಿನಿಂದ ತಾಲಿಬಾನ್​ನ ಮಹತ್ವದ ಜಯ ಎಂದು ಭಾವಿಸಲಾಗಿದೆ.

ಕುಂಡುಝå್ ನಗರವನ್ನು ವಶ ಪಡಿಸಿಕೊಂಡಿರುವುದಾಗಿ ತಾಲಿಬಾನ್ ಭಾನುವಾರ ಪ್ರಕಟಿಸಿದ್ದು ಮಾಧ್ಯಮ ಸಂಸ್ಥೆ ಹಾಗೂ ಸ್ಥಳೀಯರು ಅದನ್ನು ದೃಢಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚಿನ ಹಿಡಿತ ಸಾಧಿಸಿರುವ ಉಗ್ರರು ಈಗ ನಗರಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ. ದೇಶದ ಮೇಲಿನ ಕಪಿಮುಷ್ಟಿಯನ್ನು ಬಿಗಿಗೊಳಿಸುತ್ತಿದ್ದಾರೆ. ದೇಶದ ಉತ್ತರ ಭಾಗದಲ್ಲಿ ಪ್ರಮುಖ ನಗರವಾಗಿರುವ ಕುಂಡುಝå್ನಲ್ಲಿ ಭೀಕರ ಕಾಳಗ ನಡೆದಿದ್ದು ಉಗ್ರಗಾಮಿಗಳು ಬಹುತೇಕ ಕಟ್ಟಡಗಳನ್ನು ವಶಕ್ಕೆ ಪಡೆದಿದ್ದಾರೆ. ‘ದೇವರ ದಯೆಯಿಂದ ಕುಂಡುಝå್ ಪ್ರಾಂತ್ಯದ ರಾಜಧಾನಿ ನಗರವನ್ನು ಇಂದು ವಶಪಡಿಸಿಕೊಂಡಿದ್ದೇವೆ’ ಎಂದು ತಾಲಿಬಾನ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದೆ. ನಗರದಲ್ಲಿ ಸಂಪೂರ್ಣ ಅರಾಜಕ ಪರಿಸ್ಥಿತಿ ನೆಲೆಸಿದೆ ಎಂದು ಸ್ಥಳೀಯರೊಬ್ಬರು ವರ್ಣಿಸಿದ್ದಾರೆ. ತಾಲಿಬಾನಿಗಳು ನಗರದ ಪ್ರಮುಖ ಕೇಂದ್ರಕ್ಕೆ ಬಂದಾಗ ಅವರ ಮೇಲೆ ಸರ್ಕಾರಿ ವಾಯು ಪಡೆಯ ತುಕಡಿಗಳು ಬಾಂಬ್ ಸುರಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರತಿದಾಳಿ

ಉಗ್ರರ ವಶವಾಗಿರುವ ಪ್ರಮುಖ ಸ್ಥಾವರಗಳನ್ನು ಮರಳಿ ಪಡೆಯಲು ಸೈನಿಕರು ತೀವ್ರವಾಗಿ ಹೋರಾಡುತ್ತಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಮಾಂಡೊ ಪಡೆಗಳು ದಾಳಿ ಮುಂದುವರಿಸಿವೆ. ರಾಷ್ಟ್ರೀಯ ರೇಡಿಯೊ ಹಾಗೂ ಟಿವಿ ಕಟ್ಟಡಗಳ ಸಹಿತ ಹಲವು ಪ್ರಮುಖ ಕಟ್ಟಡಗಳಿಂದ ಭಯೋತ್ಪಾದಕರನ್ನು ಹೊರಹಾಕಲಾಗಿದೆ ಎಂದು ಸಚಿವಾಲಯ ವಿವರಿಸಿದೆ.

54 ಉಗ್ರರ ಹತ್ಯೆ

ಅಫ್ಘಾನಿಸ್ತಾನದ ದಕ್ಷಿಣದ ಹೆಲ್ಮಾಂಡ್ ಪ್ರಾಂತ್ಯದ ರಾಜಧಾನಿ ಲಷ್ಕರ್ ಘಾ ನಗರದ ಮೇಲೆ ನಡೆದ ವೈಮಾನಿಕ ದಾಳಿಗಳಿಂದ ಶಾಲೆಗಳು ಹಾಗೂ ಕ್ಲಿನಿಕ್​ಗಳಿಗೆ ಹಾನಿಯಾಗಿದೆ. ಲಷ್ಕರ್ ಘಾ ನಗರದಲ್ಲಿ ವೈಮಾನಿಕ ದಾಳಿ ನಡೆಸಿದ್ದನ್ನು ರಕ್ಷಣಾ ಖಾತೆ ಖಚಿತಪಡಿಸಿದೆ. ತಾಲಿಬಾನ್ ಶಿಬಿರದ ಮೇಲಿನ ವಾಯುಪಡೆ ದಾಳಿಗೆ 54 ಉಗ್ರರು ಹತರಾಗಿದ್ದಾರೆ. 23 ಜನರು ಗಾಯಗೊಂಡಿದ್ದಾರೆ.

ಹಿಂಸೆ ನಿಲ್ಲಿಸಲು ಭಾರತ ಕರೆ

ಆಗಸ್ಟ್ ತಿಂಗಳಿಗೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿರುವ ಭಾರತ, ಅಫ್ಘಾನಿಸ್ತಾನದಲ್ಲಿ ಹಿಂಸಾಚಾರ ಕೊನೆಗೊಳ್ಳಲು ಕ್ರಮ ಕೈಗೊಳ್ಳುವಂತೆ ಸದಸ್ಯ ದೇಶಗಳಿಗೆ ಮನವಿ ಮಾಡಿದೆ. ಆಗಸ್ಟ್ 1ರಂದು ಮಂಡಳಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿಯಾಗಿರುವ ಟಿ.ಎನ್. ತ್ರಿಮೂರ್ತಿ ಅಧ್ಯಕ್ಷತೆಯಲ್ಲಿ ಆಗಸ್ಟ್ 6ರಂದು ನಡೆದ ಭದ್ರತಾ ಮಂಡಳಿ ಸಭೆ ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ಬಗ್ಗೆ ರ್ಚಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net