

ರಾಣೆಬೆನ್ನೂರ: ವಿದ್ಯಾಥಿರ್ಗಳು ಕಾಲೇಜ್ ಹಂತದಲ್ಲಿ ನಡೆಯುವ ಪ್ರತಿಯೊಂದು ಸ್ಪರ್ಧಾತ್ಮಕ ವಿಷಯಗಳನ್ನು ಸವಾಲಾಗಿ ಸ್ವೀಕರಿಸಿ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶನ ಮಾಡಿದರೆ ಮುಂದಿನ ವೃತ್ತಿ ಜೀವನದಲ್ಲಿ ಯಶಸ್ಸು ಕಾಣಲು ಸಹಕಾರಿಯಾಗುತ್ತದೆ ಎಂದು ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಹೇಳಿದರು.
ನಗರದ ಬಿಎಜೆಎಸ್ಎಸ್ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಭೌಗೋಳಿಕ ಮಾದರಿಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುಗದಲ್ಲಿ ಪ್ರತಿಯೊಂದು ಕ್ಷೇತ್ರಗಳು ಸ್ಪರ್ಧಾತ್ಮಕಕ್ಕೆ ಒಳಗೊಂಡಿವೆ. ಆದ್ದರಿಂದ ವಿದ್ಯಾಥಿರ್ಗಳು ಹೊಸ ಹೊಸ ವಿಷಯಗಳ ಕುರಿತು ಸಂಶೋಧನೆ ಮಾಡಲು ಮುಂದಾಗಬೇಕು. ಇದರಿಂದ ಪರಿರ್ಪೂಣ ವಿದ್ಯಾಭ್ಯಾಸ ಹೊಂದಿ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದರು.
ಪ್ರಾಚಾರ್ಯ ಡಾ. ಸುರೇಶ ಬಣಕಾರ ಅಧ್ಯಕ್ಷತೆ ವಹಿಸಿದ್ದರು.
ಡಾ. ಎಸ್.ಎಲ್. ಕರ್ಲವಾಡ, ಜಿ.ಬಿ. ಬೆಳವಿಗಿ, ಡಾ. ಪುಷ್ಪಾಂಜಲಿ ಕಾಂಬಳೆ, ಉಪನ್ಯಾಸಕರಾದ ಬೀರಪ್ಪ ಲಮಾಣಿ, ರಾಜೀವ ಎಂ., ಡಾ. ಸುನೀಲ ಹಿರೇಮನಿ, ಬಸವರಾಜ ಮಾಳೇನಹಳ್ಳಿ, ಸಂತೋಷ ಭಜಂತ್ರಿ, ರಾಜೀವ ಕೆ.ಎಂ., ಪೃಥ್ವಿರಾಜ ಕಟ್ಟಿಮನಿ, ಡಾ. ಹನುಮಂತಪ್ಪ ಬ್ಯಾಡಗಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.