ಪುರಾಣ ಕಥಾನಕ ಅರ್ಥೈಸುವ ತಾಳಮದ್ದಲೆ

22sgr1
ಸಾಗರದ ಸಸರವಳ್ಳಿಯ ಗಾಡಿಗೆರೆ ವೆಂಕರಮಣ ದೇವಸ್ಥಾನದ ಸಭಾಂಗಣದಲ್ಲಿ ಸತ್ವಶೈಥಿಲ್ಯ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಯಜ್ಞೇಶ್ವರ ಹೆಗಡೆ, ಚಿನ್ಮಯ ಹೆಗಡೆ, ಕೆ.ಎನ್.ಭಾರ್ಗವ, ಮಿತ್ರ ಮಧ್ಯಸ್ಥ ಇದ್ದರು.
Published on

ಸಾಗರ: ರಾಮಾಯಣ, ಮಹಾಭಾರತದಂತಹ ಪ್ರಾಚೀನ ಕಾವ್ಯಗಳನ್ನು ಜನತೆಗೆ ಪರಿಚಯಿಸುವಲ್ಲಿ ತಾಳಮದ್ದಲೆ ಸಹಕಾರಿ ಎಂದು ಗೀರ್ವಾಣ ಭಾರತೀ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದರು.

ತಾಲೂಕಿನ ಸಸರವಳ್ಳಿಯ ಗಾಡಿಗೆರೆ ವೆಂಕರಮಣ ದೇವಸ್ಥಾನದ ಸಭಾಂಗಣದಲ್ಲಿ ಗೀರ್ವಾಣ ಭಾರತೀ ಟ್ರಸ್ಟ್ ಮತ್ತು ಅಂಬಾರಗೋಡ್ಲು ಪಾಂಚಜನ್ಯ ಕಲಾ ವೇದಿಕೆಯಿಂದ ಆಯೋಜಿಸಿದ್ದ ಡಿ.ಎಸ್.ಶ್ರೀಧರ ವಿರಚಿತ ಸತ್ವಶೈಥಿಲ್ಯ ಯಕ್ಷಗಾನ ತಾಳಮದ್ದಲೆ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಳಮದ್ದಲೆಯು ಯಕ್ಷಗಾನ ಅಥವಾ ಕಲೆ ಪ್ರಕಾರವಷ್ಟೆ ಅಲ್ಲ, ನೋಡುಗರನ್ನು ತನ್ನತ್ತ ಆಕರ್ಷಿಸುವ ಜತೆಗೆ ಪಾತ್ರದೊಳಗೆ ನಮ್ಮನ್ನು ಕರೆದೊಯ್ಯುತ್ತದೆ. ನಮ್ಮ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸಿಕೊಳ್ಳುವತ್ತ ಯುವಜನರು ಹೆಚ್ಚಿನ ಆಸಕ್ತಿ ವಹಿಸಬೇಕು. ನಗರ ವ್ಯಾಪ್ತಿಯಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ತಾಳಮದ್ದಲೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ತಿಳಿಸಿದರು.

ಟ್ರಸ್ಟ್ ಕಾರ್ಯದರ್ಶಿ ಎಂ.ಎ.ಗೌತಮ್ ಮಾತನಾಡಿ, ಗೀರ್ವಾಣ ಭಾರತೀ ಟ್ರಸ್ಟ್ ವೇದಾಧ್ಯಯನ ಪ್ರೋತ್ಸಾಹಿಸುವ ಜತೆಗೆ ನಮ್ಮ ನೆಲಮೂಲ ಕಲೆಗೆ ಉತ್ತೇಜನ ನೀಡುತ್ತಿದೆ ಎಂದರು. ಹಿಮ್ಮೇಳದಲ್ಲಿ ಯಜ್ಞೇಶ್ವರ ಹೆಗಡೆ ಅಂಬಾರಗೋಡ್ಲು, ಚಿನ್ಮಯ ಹೆಗಡೆ, ಕೆ.ಎನ್.ಭಾರ್ಗವ, ಮಿತ್ರ ಮಧ್ಯಸ್ಥ, ಪ್ರಮುಖ ಪಾತ್ರಗಳಲ್ಲಿ ಬಿ.ಟಿ.ಅರುಣ್, ಕೆ.ಆರ್.ರವಿಶಂಕರ್, ಪ್ರಶಾಂತ ಮಧ್ಯಸ್ಥ ಪಾಲ್ಗೊಂಡಿದ್ದರು. ಪ್ರಮುಖರಾದ ಎಂ.ಕೆ.ಪ್ರಕಾಶ್, ಜಿ.ಎಂ.ಸುದರ್ಶನ, ಜಿ.ಜಿ.ದತ್ತಾತ್ರೇಯ, ಭಾರ್ಗವ ಬಾಪಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net