

ಶಿವಮೊಗ್ಗ: ಛಾಯಾಗ್ರಹಣ ಒಂದು ಕಲೆಯಾಗಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬೇಕು ಮತ್ತು ಈ ಕಲೆಯಲ್ಲಿ ಆಸಕ್ತಿ ಹೊಂದಬೇಕು ಎಂದು ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಹೇಳಿದರು.
ನಗರದ ನಿಜಲಿಂಗಪ್ಪ ಸಭಾಂಗಣದಲ್ಲಿ ಶನಿವಾರ ಶಿವಮೊಗ್ಗದ ಹವ್ಯಾಸಿ ಛಾಯಾಗ್ರಾಹಕರ ಸಂಘದಿಂದ ವಿಶ್ವ ಛಾಯಾಗ್ರಹಣ ದಿನ, ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಬಂದ ಮೇಲೆ ಎಲ್ಲರೂ ಛಾಯಾಗ್ರಾಹಕರಾಗಿದ್ದಾರೆ. ಅತ್ಯಾಧುನಿಕ ಮೊಬೈಲ್‌ಗಳು ಬಂದಿದ್ದು, ಅಡ್ವಾನ್ಸ್ ಟೆಕ್ನಾಲಜಿ ಒಳಗೊಂಡಿದೆ. ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವುದು ಕಲೆ ಅಲ್ಲ. ಕ್ಯಾಮೆರಾದ ಮೂಲಕ ಸುತ್ತಮುತ್ತಲ ವೈವಿಧ್ಯತೆ ಸೆರೆಹಿಡಿದು ಅದರ ಬಗ್ಗೆ ಮಾಹಿತಿ ಪಡೆದು ಹಂಚಿಕೊಂಡಾಗ ಭವಿಷ್ಯಕ್ಕೆ ಸಹಕಾರಿಯಾಗುತ್ತದೆ. ಒಂದು ಛಾಯಾಚಿತ್ರದಿಂದ ಅನೇಕ ಮಾಹಿತಿಗಳು ಲಭ್ಯವಾಗುತ್ತದೆ ಎಂದರು.
ಛಾಯಾಗ್ರಹಣದಲ್ಲಿ ಡಿಜಿಟಲ್ ಯುಗ ಪ್ರವೇಶವಾಗಿದ್ದು, ಎಲ್ಲ ಜೀವವೈವಿಧ್ಯ ಪ್ರಾಣಿ, ಪಕ್ಷಿ, ಜೀವಜಂತುಗಳ ಮತ್ತು ಪರಿಸರದ ಮಾಹಿತಿ ಛಾಯಾಚಿತ್ರಗಳಿಂದ ಲಭ್ಯವಾಗುತ್ತದೆ ಎಂದರು.
ಶಿವಮೊಗ್ಗದ ಹವ್ಯಾಸಿ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಡಾ. ಶ್ರೀಕಾಂತ್ ಹೆಗಡೆ ಮಾತನಾಡಿ, ೆಟೋಗ್ರಫಿ ಒಂದು ಕಲೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಆವಿಷ್ಕಾರವಾಗಿದೆ. ೆಟೋಗ್ರಫಿಯ ಬೇರೆ ಬೇರೆ ಆಯಾಮಗಳು ಸೂಕ್ಷ್ಮ ಜೀವಿ ವಲಯ, ಪ್ರಾಣಿ ಪಕ್ಷಿಗಳ, ಜೀವ ಜಂತುಗಳ ಮತ್ತು ಖಾಸಗಿ ಸಮಾರಂಭಗಳ ವಿಶೇಷ ಕ್ಷಣಗಳನ್ನು ಪರಿಚಯಿಸುತ್ತದೆ. ಇದಕ್ಕಾಗಿ ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಗುತ್ತದೆ ಎಂದರು.
ಹವ್ಯಾಸಿ ಛಾಯಾಗ್ರಾಹಕ ಡಾ. ಶೇಖರ್ ಗೌಳೇರ್ ಅವರನ್ನು ಸನ್ಮಾನಿಸಲಾಯಿತು. ಸಂಘದಿಂದ ಛಾಯಾಚಿತ್ರ ಪ್ರದರ್ಶನ ಕೂಡ ಹಮ್ಮಿಕೊಳ್ಳಲಾಗಿತ್ತು. ಡಾ. ಪರಮೇಶ್ವರ್ ಶಿಗ್ಗಾಂವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶಿವಮೊಗ್ಗ ಯೋಗರಾಜ್, ಖಜಾಂಚಿ ಎಚ್.ಪ್ರದೀಪ್‌ಕುಮರ್, ವಿನಾಯಕ ಗುಜ್ಜರ್ ಸೇರಿ ಸಂಘದ ಪದಾಧಿಕಾರಿಗಳು ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.