ನಾಲೆ ಹೂಳು ತೆಗೆಸಿ ನೀರೊದಗಿಸಲು ಅಗತ್ಯ ಕ್ರಮ ಕೈಗೊಳ್ಳಿ

08 HANUR 2
ಸರಗೂರಿನ ಪಂಪ್‌ಹೌಸ್‌ನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಅವರು ಅಧಿಕಾರಿಗಳ ಸಭೆ ನಡೆಸಿದರು. ಮಹೇಶ್, ಉಮೇಶ್, ಕರುಣಾಮಯಿ ಇತರರು ಇದ್ದರು.
Published on

ಹನೂರು: ನಾಲೆಯನ್ನು ರಿಪೇರಿ ಪಡಿಸುವುದರ ಜತೆಗೆ ಹೂಳು ತೆಗೆಸಿ ಸಮರ್ಪಕವಾಗಿ ನೀರೊದಗಿಸಲು ಅಗತ್ಯ ಕ್ರಮವಹಿಸುವುದರ ಮೂಲಕ ರೈತರ ಹಿತ ಕಾಪಾಡಬೇಕು ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ಕೊಳ್ಳೇಗಾಲದ ಸಮೀಪದ ಸರಗೂರು ಪಂಪ್‌ಹೌಸ್‌ಗೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ತೆಳ್ಳನೂರು ಭಾಗದಲ್ಲಿ ಸುಮಾರು 7,800 ಎಕರೆ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಕೃಷಿ ಮಾಡುತ್ತಿದ್ದಾರೆ. ಆದರೆ ಸಮರ್ಪಕವಾಗಿ ನೀರೊದಗಿಸುತ್ತಿಲ್ಲ ಎಂಬುದು ಕೇಳಿಬಂದಿದೆ. ಹಾಗಾಗಿ ದುರಸ್ತಿಯಾಗಿರುವ ಕಡೆಗಳಲ್ಲಿ ನಾಲೆಯನ್ನು ರಿಪೇರಿ ಪಡಿಸುವುದರ ಜತೆಗೆ ಹೂಳು ತೆಗೆಸಿ ಕಟ್ಟಕಡೆಯ ರೈತರ ಜಮೀನಿಗೂ ನೀರೊದಗಿಸುವ ಕೆಲಸವಾಗಬೇಕು. ಇನ್ನು ಗುಂಡಾಲ್ ಜಲಾಶಯದ ನಾಲೆಗಳನ್ನು ಅಭಿವೃದ್ಧಿಪಡಿಸುವ ಸಂಬಂಧ 80 ಕೋಟಿ ರೂ. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದ್ದು, ಸದ್ಯದಲ್ಲಿಯೇ ಈ ಕಾರ್ಯಕ್ಕೆ ಮಂಜೂರಾತಿ ಸಿಗಲಿದೆ. ಆದ್ದರಿಂದ ಈ ಬಗ್ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವುದರ ಮೂಲಕ ನಾಲೆಗಳ ಅಭಿವೃದ್ಧಿಯತ್ತ ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ಕೃಷಿಗೆ ನೀರಾವರಿ ಕೊರತೆಯಾಗದಂತೆ ರೈತರ ಹಿತ ಕಾಪಾಡಬೇಕು ಎಂದು ತಿಳಿಸಿದರು.

ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಮಹೇಶ್, ಇಇ ಉಮೇಶ್, ಎಇಇಗಳಾದ ರಾಮಕೃಷ್ಣ, ಕರುಣಾಮಯಿ, ಚಂದ್ರಕಾಂತ್, ಎಇಗಳಾದ ಬಸವೇಶ್, ವಿಕಾಸ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net