ಹಣ ಪಡೆದು ಮನೆಗಳ ಹಂಚಿಕೆ

maski mounesh
ಮೌನೇಶ ರಾಠೋಡ
Published on

ಮಸ್ಕಿ: ವಸತಿ ಯೋಜನೆಯಡಿ ತಲೇಖಾನ ಗ್ರಾಪಂ ಅಧ್ಯಕ್ಷೆ ಅವರು ಫಲಾನುಭವಿಗಳಿಂದ ಹಣ ಪಡೆದು ತರಾತುರಿಯಲ್ಲಿ ಮನೆಗಳ ಹಂಚಿಕೆ ಮಾಡಲು ಮುಂದಾಗಿದ್ದು, ತಡೆಹಿಡಿಯಬೇಕೆಂದು ಗ್ರಾಪಂ ಸದಸ್ಯ ಮೌನೇಶ ರಾಠೋಡ್ ಆಗ್ರಹಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲೇಖಾನ್ ಪಂಚಾಯಿತಿಗೆ ಸರ್ಕಾರದಿಂದ 260 ಮನೆಗಳು ಮಂಜೂರಾಗಿವೆ. ನಿಯಮದಂತೆ ಗ್ರಾಮ-ವಾರ್ಡ್‌ಸಭೆಯಲ್ಲಿಯೇ ಅರ್ಹ ಪಲಾನುಭವಿಗಳನ್ನು ಆಯ್ಕೆ ಮಾಡಬೇಕು. ಆದರೆ ಗ್ರಾಪಂ ಅಧ್ಯಕ್ಷೆ ಉಮ್ಮವ್ವ ಒಂದೇ ದಿನ ಫಲಾನುಭವಿಗಳ ಆಯ್ಕೆಗೆ ಮುಂದಾಗಿದ್ದಾರೆ ಎಂದು ಮೌನೇಶ ಆರೋಪಿಸಿದರು.

ಗ್ರಾಪಂ ಅಧ್ಯಕ್ಷೆ ವಿರುದ್ಧ ಸದಸ್ಯತ್ವ ಅನರ್ಹತೆ ದೂರು ದಾಖಲಾಗಿದ್ದು, ನೋಟಿಸ್ ಬಂದಿದೆ. ಅದನ್ನು ಮುಚ್ಚಿಟ್ಟು ಹಣ ಮಾಡುವ ಉದ್ದೇಶದಿಂದ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡದೆ ಮನೆಗಳ ಹಂಚಿಕೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಪ್ರಮುಖರಾದ ವೆಂಕಟೇಶ್ ನಾಯಕ್, ಶ್ರೀನಿವಾಸ, ಮೌನೇಶ ಜಾಧವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net