ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ

dss pro
ಸಾಗರದಲ್ಲಿ ಕಸ ವಿಲೇವಾರಿ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸಾಗರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ರೇವಪ್ಪ, ಗಣಪತಿ, ಅಣ್ಣಪ್ಪ ಪೂಜಾರಿ, ಉಮಾ, ಕನ್ನಪ್ಪ, ಪ್ರಶಾಂತ್, ಜಗನ್ನಾಥ್ ಇತರರಿದ್ದರು.
Published on

ಸಾಗರ: ನಗರ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿ, ಕುಡಿಯುವ ನೀರು ಸರಬರಾಜಿಗೆ ಒತ್ತಾಯಿಸಿ ಶುಕ್ರವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಸಾಗರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ನಗರದ 31 ವಾರ್ಡ್‌ಗಳಲ್ಲಿ ಜನರಿಗೆ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸುತ್ತಿಲ್ಲ. ನೀರಿನ ಅಸಮರ್ಪಕ ಪೂರೈಕೆ ಕುರಿತು ಪೌರಾಯುಕ್ತರು, ನಗರಸಭೆ ಅಧಿಕಾರಿಗಳನ್ನು ವಿಚಾರಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ವಾರ್ಡ್ ಸದಸ್ಯರನ್ನು ಕೇಳಿದರೆ ಪೌರಾಯುಕ್ತರು, ಇಂಜಿನಿಯರ್‌ಗಳು ನಮ್ಮ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂದು ದೂರುತ್ತಾರೆ ಎಂದು ತಿಳಿಸಿದರು.

ಶಿವಮೊಗ್ಗ ರಸ್ತೆ, ಭೀಮನಕೋಣೆ ರಸ್ತೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ ಹಿಂಭಾಗ, ಅಂಬೇಡ್ಕರ್ ಭವನ, ಗಣಪತಿ ಕೆರೆ, ವಿನೋಬ ನಗರ, ಖಾಸಗಿ ಬಸ್ ನಿಲ್ದಾಣ, ತಿಮ್ಮಣ್ಣ ನಾಯಕನ ಕೆರೆ, ಕಾಗೋಡು ತಿಮ್ಮಪ್ಪ ಬಡಾವಣೆ ಮುಂತಾದೆಡೆ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ಸಾಂಕ್ರಾಮಿಕ ರೋಗಭೀತಿ ಎದುರಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ ವಾರ್ಡ್ ಭೇಟಿ ಕೊಡಬೇಕಾಗಿದ್ದ ಪೌರಾಯುಕ್ತರು ಕರ್ತವ್ಯ ಮರೆತಿದ್ದಾರೆ. ಅಧಿಕಾರಿಗಳು ಸಹ ಸ್ವಚ್ಛತೆ ಬಗ್ಗೆ ಗಮನ ಹರಿಸುತ್ತಿಲ್ಲ. ಬೀದಿದೀಪ ನಿರ್ವಹಣೆಯಲ್ಲೂ ನಗರಸಭೆ ವಿಫಲಾಗಿದೆ ಎಂದು ದೂರಿದರು.

ಸಮಸ್ತೆಗಳ ಪರಿಹಾರಕ್ಕೆ ನಗರಸಭೆ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು. ಸಮಿತಿ ತಾಲೂಕು ಸಂಚಾಲಕ ರೇವಪ್ಪ ಕೆ. ಹೊಸಕೊಪ್ಪ, ಗಣಪತಿ, ಅಣ್ಣಪ್ಪ ಪೂಜಾರಿ, ಉಮಾ, ಕನ್ನಪ್ಪ, ಪ್ರಶಾಂತ್, ಜಗನ್ನಾಥ್, ಜಾನ್ಸನ್ ಲೋಬೋ, ರವಿಕುಮಾರ್, ಮಹಾಬಲ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net