ಅಪಹಾಸ್ಯ ಮಾಡುವವರ ವಿರುದ್ಧ ಕ್ರಮ ಜರುಗಿಸಿ

archaka parishat
ಧರ್ಮಸ್ಥಳಕ್ಕೆ ಸಂಬಂಧಿಸಿ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಿಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ರಾಘವೇಂದ್ರ ಉಡುಪ, ವಿನಯ್ ಭೂಷಣ, ಮಹೀಪತಿ ಜೋಯ್ಸ, ವೆಂಕಟೇಶ್, ಶ್ರೀಕಾಂತ್ ಇತರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಹಿಂದು ದೇವಾಲಯಗಳ ಅರ್ಚಕರು, ಪುರೋಹಿತರು ಧಾರ್ಮಿಕ ಚಿಂತಕರ ಒಕ್ಕೂಟದಿಂದ ಮಂಗಳವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಧರ್ಮಸ್ಥಳ ಹಾಗೂ ಇತರೆ ಧಾರ್ಮಿಕ ಕ್ಷೇತ್ರಗಳನ್ನು ಹಿಂದು ಹಾಗೂ ಹಿಂದುತ್ವ ವಿರೋಧಿಗಳು ನಿಂದಿಸುತ್ತಿದ್ದಾರೆ. ಅಪಹಾಸ್ಯ ಮಾಡುತ್ತಿದ್ದಾರೆ. ಈ ಕೃತ್ಯದ ಹಿಂದೆ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರವಿದೆ ಎಂದು ದೂರಿದರು.

ಇಂತಹ ಕೃತ್ಯಗಳಿಂದ ಸಮಸ್ತ ಹಿಂದುಗಳ ಧರ್ಮಾಚರಣೆಗೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತಿದೆ. ಇಂತಹ ಧರ್ಮ ವಿರೋಧಿಗಳು, ಹಿಂದೂ ವಿರೋಧಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 298, 299, 300, 301 ಹಾಗೂ 302ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿ, ಧಾರ್ಮಿಕ ಕೇಂದ್ರಗಳಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.

ಅರ್ಚಕರ ಸಂಘದ ಪ್ರಮುಖರಾದ ರಾಘವೇಂದ್ರ ಉಡುಪ, ರಾಮಪ್ರಸಾದ್, ಸುಬ್ರಹ್ಮಣ್ಯ ಭಟ್, ವಿನಯ್ ಭೂಷಣ, ಮಹೀಪತಿ ಜೋಯ್ಸ, ಚೇತನ್ ಭಟ್, ವಿಘ್ನೇಶ್‌ಪ್ರಸಾದ್, ವೆಂಕಟೇಶ್, ರವೀಂದ್ರ, ವಕೀಲ ಶ್ರೀಕಾಂತ್ ಸೋಗಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net