ಹತ್ಯೆ ಆರೋಪಿಗ ಸನ್ಮಾನಿಸುವವರ ವಿರುದ್ಧ ಕ್ರಮ ಕೈಗೊಳ್ಳಿ

gowri
ಗೌರಿ ಲಂಕೇಶ್ ಹತ್ಯೆ ಆರೋಪಿಗಳನ್ನು ಸನ್ಮಾನಿಸುತ್ತಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ಪ್ರಮುಖರು ಪ್ರತಿಭಟನೆ ನಡೆಸಿದರು. ಕೆ.ಎಲ್.ಅಶೋಕ್, ಶೃಂಗೇಶ್, ಬಿ.ಚಂದ್ರೇಗೌಡ, ರವಿಕುಮಾರ್, ಕೆ.ಪಿ.ಶ್ರೀಪಾಲ್ ಇತರರಿದ್ದರು.
Published on

ಶಿವಮೊಗ್ಗ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸನ್ಮಾನ ಮಾಡುತ್ತಿರುವ ಬೆಳವಣಿಗೆ ಆಘಾತಕಾರಿ. ಹೀಗೆ ಸನ್ಮಾನ ಮಾಡುವ ವ್ಯಕ್ತಿಗಳ ವಿರುದ್ಧ ಕೊಲೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಗೌರಿ ಸ್ಮಾರಕ ಟ್ರಸ್ಟ್ ಹಾಗೂ ಗೌರಿ ಬಳಗದ ಪ್ರಮುಖರು ಮಂಗಳವಾರ ಪ್ರತಿಭಟನೆ ನಡೆಸಿದರು.

ಅತ್ಯಾಚಾರಿಗಳಿಗೆ ಹಾಗೂ ಕೊಲೆಗಡುಕರಿಗೆ ಬೇರೆ ರಾಜ್ಯಗಳಲ್ಲಿ ಸನ್ಮಾನ ಮಾಡಿರುವುದನ್ನು ನೋಡಿದ್ದೇವೆ. ಇದೇ ಪರಿಪಾಠ ನಮ್ಮ ರಾಜ್ಯದಲ್ಲೂ ಮುಂದುವರಿಯುತ್ತಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಸನ್ಮಾನಿಸುತ್ತಿರುವುದು ಮಾನವೀಯ ಮೌಲ್ಯಗಳಿಗೆ ಕಳಂಕ ಉಂಟುಮಾಡುವ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌರಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಶ್ರೀಕಾಂತ್ ಹೊಂಗಾರ‌್ಕರ್‌ಗೆ ಜಾಮೀನು ಸಿಕ್ಕಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಈತ ಸಕ್ರಿಯವಾಗಿರುವುದು ಖಂಡನೀಯ. ಈ ಪ್ರಕರಣದಲ್ಲಿ ಕೂಡಲೇ ತೀರ್ಪು ಪ್ರಕಟಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಗೌರಿ ಬಳಗದ ಪ್ರಮುಖರಾದ ಬಿ.ಚಂದ್ರೇಗೌಡ, ಕೆ.ಎಲ್.ಅಶೋಕ್, ಕೆ. ರಾಘವೇಂದ್ರ, ಶೃಂಗೇಶ್, ರವಿಕುಮಾರ್, ಹಾಲೇಶಪ್ಪ, ಕೆ.ಪಿ.ಶ್ರೀಪಾಲ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net