

ಮುಳಬಾಗಿಲು: ಕುಲಾಂತರಿ ತಳಿಯಿಂದ ಭೂಮಿಯ ಫಲವತ್ತತೆ ಣಿಸುತ್ತಿದ್ದು, ಬಹುರಾಷ್ಟ್ರೀಯ ಬೀಜ ಕಂಪನಿಗಳು ದೇಶಿಯ ಬೀಜಗಳನ್ನು ನಾಶಪಡಿಸುವ ಹುನ್ನಾರ ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಂಥ ಕಂಪನಿಗಳ ವಿರುದ್ಧ ಕ್ರಮವಹಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಮುಖಂಡರು ಬುಧವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಬರಗಾಲವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಪರಿಹಾರ ನೀಡುವ ಜತೆಗೆ ನಾಪತ್ತೆಯಾಗಿರುವ ಬೆಳೆ ವಿಮೆ ಕಂಪನಿಗಳನ್ನು ಹುಡುಕಿಕೊಡಬೇಕು. ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಪೂರ್ವಜರ ಕಾಲದ ಕೃಷಿ ಪದ್ಧತಿಯನ್ನು ಸಂಪೂರ್ಣವಾಗಿ ರ್ನಿಲಕ್ಷ$್ಯ ಮಾಡಿ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳಿಂದ ಕೃಷಿ ಭೂಮಿಗೆ ಮಾರಕವಾಗುವ ವಿವಿಧ ತಳಿಗಳನ್ನು ದೇಶದಲ್ಲಿ ಪರಿಚಯ ಮಾಡುವ ಮೂಲಕ ರೈತರಿಗೆ ಮರಣ ಶಾಸನ ಬರೆಯುತ್ತಿದ್ದಾರೆ. ಕುಲಾಂತರಿ ತಳಿಗಳ ಅಧ್ಯಯನಕ್ಕೆ ಅವಕಾಶ ಕೊಟ್ಟಿರುವ ಸರ್ಕಾರ ಬೀಜ ಕಂಪನಿಗಳ ಕೈಗೊಂಬೆಗಳಾಗಿವೆ ಎಂದು ದೂರಿದರು.
ಕಾನೂನು ಜಾರಿಗೊಳಿಸುವ ಮುನ್ನ ಅದರ ಸಾಧಕ&ಬಾಧಕಗಳ ಬಗ್ಗೆ ಜಿಲ್ಲೆಯ ರೈತರ ಜತೆ ಚರ್ಚಿಸಬೇಕಾಗಿತ್ತು. ಆದರೆ, ಸರ್ಕಾರ ಇದನ್ನು ಪಾಲಿಸದೇ ನಾಮ್ಕಾವಸ್ತೆಗೆ ಸಭೆ ಮಾಡಿ ಕಾನೂನು ಜಾರಿಗೊಳಿಸಲು ಮುಂದಾಗಿದೆ ಎಂದು ದೂರಿದರು.
ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಬೆಳೆ ಪರಿಹಾರ ಕೊಡುವಲ್ಲಿ ಸರ್ಕಾರ ವಿಫಲವಾಗಿದೆ. ಆಳುವ ಸರ್ಕಾರಗಳು ರೈತರ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪ್ರಸ್ತುತ ಸರ್ಕಾರ ಮುಡಾ ಹಗರಣ, ವಾಲ್ಮೀಕಿ ಹಗರಣ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿ ರೈತರನ್ನು ರ್ನಿಲಕ್ಷ$್ಯ ಮಾಡಿದೆ ಎಂದು ಆರೋಪಿಸಿದರು.
ಸಮರ್ಪಕವಾದ ಬೆಳೆ ಸಮೀಕ್ಷೆ ನಡೆಸುವಲ್ಲಿ ಕಂದಾಯ ಇಲಾಖೆ ಹಿಂದೆ ಬಿದ್ದಿದೆ. ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗೋಮಾಳ, ಗುಂಡುತೋಪು ಉಳಿಸಬೇಕಾದ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಗ್ರೇಡ್ -2 ತಹಸೀಲ್ದಾರ್ ಬಿ. ಆರ್. ಮುನಿವೆಂಕಟಪ್ಪ ಅವರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದರು.
ರೈತ ಸಂಘದ ಮುಖಂಡರಾದ ಸುನೀಲ್ ಕುಮಾರ್, ಜುಬೇರ್ಪಾಷಾ, ಯಲುವಳ್ಳಿ ಪ್ರಭಾಕರ್, ಆನಂದರೆಡ್ಡಿ, ಚಲಪತಿ, ವಿನೋದ್, ಶಶಿ, ಮುನಿರಾಜು, ನಾಗೇಶ್, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಅಂಬ್ಲಿಕಲ್ ಮಂಜುನಾಥ, ವಿಶ್ವನಾಥ್, ವಿಜಯ್ಪಾಲ್ ಇದ್ದರು.