ತಹವ್ವೂರ್ ರಾಣಾ ಭಾರತದ ಇತರ ನಗರಗಳ ಮೇಲೂ ಕಣ್ಣಿಟ್ಟಿದ್ದ; 'ಭಯೋತ್ಪಾದನಾ ನಿಗ್ರಹ ಸಂಸ್ಥೆ'| tahawwur Rana

Tahawwur Rana
Published on

ಸಂಚುಕೋರ ತಹವ್ವೂರ್ ರಾಣಾ ಮುಂಬೈ ದಾಳಿಯಲ್ಲಿ ಬಳಸಲಾದ ತಂತ್ರಗಳನ್ನು ಇತರ ನಗರಗಳಲ್ಲಿಯೂ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು ಎಂಬ ಅನುಮಾನವಿದೆ. ಇದರಿಂದಾಗಿ ಇದೇ ರೀತಿಯ ಸಂಚುಗಳನ್ನು ಬೇರೆಡೆ ಅಭಿವೃದ್ಧಿಪಡಿಸಲಾಗಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸಲು ಪ್ರೇರೇಪಿಸಿತು, ಎಂದು ನ್ಯಾಯಾಧೀಶರಿಗೆ NIA ತಿಳಿಸಿದೆ.

ನವದೆಹಲಿ: ಆರೋಪಿ ತಹವ್ವೂರ್ ರಾಣಾ ಮುಂಬೈ ಭಯೋತ್ಪಾದಕ ದಾಳಿಯಂತೆಯೇ ಭಾರತದ ಅನೇಕ ನಗರಗಳನ್ನು ಗುರಿಯಾಗಿಸಿಕೊಂಡು ಇತರ ಅನೇಕ ಸಂಚುಗಳನ್ನು ರೂಪಿಸಿದ್ದ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹೇಳಿದೆ.

ಕ್ರಿಮಿನಲ್ ಪಿತೂರಿಯ ಭಾಗವಾಗಿ, ಆರೋಪಿ ನಂಬರ್ 1 ಡೇವಿಡ್ ಕೋಲ್ಮನ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ರಾಣಾ ಜೊತೆ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದ ಎಂದು NIA ತಿಳಿಸಿದೆ. ಅಮೆರಿಕದಿಂದ ರಾಣಾನನ್ನು ಹಸ್ತಾಂತರಿಸುವ ಮುನ್ನ ದೆಹಲಿ ನ್ಯಾಯಾಲಯವು ಇತ್ತೀಚೆಗೆ ಮುಂಬೈ ದಾಳಿಯ ವಿಚಾರಣಾ ದಾಖಲೆಗಳನ್ನು ಸ್ವೀಕರಿಸಿದೆ ಎನ್ನಲಾಗ್ತಿದೆ.

ಅಮೆರಿಕಾದಿಂದ ವಿಶೇಷ ವಿಮಾನದಲ್ಲಿ ಬಂದ ಉಗ್ರವಾದಿ ತಹಾವುರ್‌ ರಾಣಾ ನಿನ್ನೆ ಮಧ್ಯಾಹ್ನ ದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಲ್ಯಾಂಡ್‌ ಆಗಿತ್ತು. ತಕ್ಷಣ ಆತನನ್ನ ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು ಆತನನ್ನು ಬಂಧಿಸಿದರು. ಬಳಿಕ ರಿಮ್ಯಾಂಡ್ ಅರ್ಜಿ ಸಲ್ಲಿಕೆ ಮಾಡಿ ಮಾಸ್ಟರ್‌ಮೈಂಡ್‌ನ ಪಟಿಯಾಲ ಹೌಸ್ ಕೋರ್ಟ್‌ಗೆ ಹಾಜರು ಪಡಿಸಲಾಯ್ತು. ಈ ವೇಳೆ 20 ದಿನಗಳು ಕಸ್ಟಡಿಗೆ ಕೊಡುವಂತೆ ಎನ್​ಐಎ ಪರ ವಕೀಲ ದಯಾನ್ ಕೃಷ್ಣನ್ ಮನವಿ ಮಾಡಿದ್ರು. ಈ ಮನವಿಯನ್ನ ಪುರಸ್ಕರಿಸಿದ ಕೋರ್ಟ್, 18 ದಿನಗಳ ವರೆಗೆ ರಾಣಾನನ್ನ ಎನ್​ಐಎ ಕಸ್ಟಡಿಗೆ ನೀಡಿದೆ. ಇದೀಗ ಕಸ್ಟಡಿಗೆ ಪಡೆದಿರೋ ಎನ್​ಐಎ ಟೀಂ ರಾಣಾನನ್ನ ದೆಹಲಿಯ NIA ಹೆಡ್ ಕ್ವಾರ್ಟರ್ಸ್​ನಲ್ಲಿನ ಸ್ಪೆಷಲ್ ಸೆಲ್​ನಲ್ಲಿಟ್ಟು ವಿಚಾರಣೆ ನಡೆಸುತ್ತಿದೆ.

(ಏಜೆನ್ಸೀಸ್)

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಚಂದರ್‌ಜೀತ್ ಸಿಂಗ್ ಅವರು ಗುರುವಾರ ತಡರಾತ್ರಿ 1ಕ್ಕೆ ರಾಣಾನನ್ನು ಎನ್‌ಐಎ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದರು. ಅದರ ಬೆನ್ನಲ್ಲೇ ಆತನನ್ನು ಭಾರಿ ಬಿಗಿ ಭದ್ರತೆಯೊಂದಿಗೆ ಸಿಜಿಒ ಸಂಕೀರ್ಣದಲ್ಲಿರುವ ಎನ್‌ಐಎ ಕೇಂದ್ರ ಕಚೇರಿಗೆ ಕರೆತರಲಾಗಿದೆ. ರಾಣಾನನ್ನು ಎನ್‌ಐಎ ಕೇಂದ್ರ ಕಚೇರಿಯಲ್ಲೇ ವಿಚಾರಣೆಗೆ ಒಳಪಡಿಸಲಾಗುತ್ತದೆ. ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net