ಶಾಲೆಯಲ್ಲಿ ಪಾಠ ಮಾಡಿದ ತಹಸೀಲ್ದಾರ್

28 SARAG 1
Published on

ಸರಗೂರು : ಹಾದನೂರು ಸಮೀಪದ ಯಶವಂತಪುರ ನೂತನ ಕಂದಾಯ ಗ್ರಾಮದ ಸರ್ವೇ ನಿಮಿತ್ತ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್ ರುಕೀಯಾ ಬೇಗಂ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಮಕ್ಕಳೊಂದಿಗೆ ಚರ್ಚೆ ನಡೆಸಿದರು.
ಶಾಲೆಯಲ್ಲಿ ಬಿಸಿಯೂಟ ವ್ಯವಸ್ಥೆ, ಪಾಠ- ಪ್ರವಚನಗಳ ವೈಖರಿ ಬಗ್ಗೆ ಮಾಹಿತಿ ಪಡೆದರು. ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದ ಅವರು ಸಾಮಾನ್ಯ ಜ್ಞಾನ ಪರೀಕ್ಷಿಸಿದರು. ಶಾಲೆಯ ಶುಚಿತ್ವವನ್ನು ಗಮನಿಸಿ, ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಠಡಿ ಪರಿಶೀಲನೆ : ಶಿಥಿಲಗೊಂಡಿರುವ ಎರಡು ಶಾಲಾ ಕೊಠಡಿ ಕಟ್ಟಡಗಳನ್ನು ನೋಡಿ ಗಾಬರಿಗೊಂಡ ತಹಸೀಲ್ದಾರ್, ಇಂತಹ ಕಟ್ಟಡಗಳಲ್ಲಿ ಯಾವ ಧೈರ್ಯದಿಂದ ಮಕ್ಕಳನ್ನು ಕೂರಿಸಿ ಪಾಠ ಮಾಡುತ್ತಿದ್ದೀರಾ? ಏನಾದರೂ ವ್ಯತ್ಯಾಸವಾದರೆ ಕಥೆ ಏನು ಎಂದು ಆತಂಕ ವ್ಯಕ್ತಪಡಿಸಿದರು. ಮುಖ್ಯ ಶಿಕ್ಷಕರೊಂದಿಗೆ ಈ ಬಗ್ಗೆ ಮಾತನಾಡಿ ಮಾಹಿತಿ ಪಡೆದ ಅವರು, ಕೊಠಡಿ ನಿರ್ಮಾಣಕ್ಕೆ ಹಣ ಮಂಜೂರು ಮಾಡುವ ಬಗ್ಗೆ ಸಂಬಂಧ ಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ತಾಪಂ ಇಒಗೆ ಪತ್ರ ಬರೆಯತ್ತೇನೆ. ಶಾಲೆಯಿಂದಲೂ ದೂರು ನೀಡುವಂತೆ ಸೂಚನೆ ನೀಡಿದರು.
ರಾಜಸ್ವ ನಿರೀಕ್ಷಕ ಮುಜೀಬ್, ಸರ್ವೇ ಅಧಿಕಾರಿ ವೆಂಕಟೇಶ್, ಮುಖ್ಯಶಿಕ್ಷಕ ಲೋಹಿತ್, ಮುಖಂಡರಾದ ನಾಗರಾಜಪ್ಪ, ವೈ.ಆರ್.ರಂಗಸ್ವಾಮಿ, ಗಣೇಶ್, ಗುರುಸ್ವಾಮಿ, ಸ್ವಾಮಿ, ಸೋಮಣ್ಣ, ರಾಜೇಶ್, ಮಂಜುನಾಥ್, ರಾಜಶೇಖರ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net