ದೆಹಲಿ ಪರೇಡ್​ನಲ್ಲಿ ಮನಸೆಳೆದ ಸ್ತಬ್ಧಚಿತ್ರಗಳು: ಒಂದೊಂದು ರಾಜ್ಯದ ಟ್ಯಾಬ್ಲೋಗೂ ವಿಶೇಷ ಥೀಮ್​

Tableau in Delhi Parade
Published on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥ್​ನಲ್ಲಿ ನಡೆದ ವಿವಿಧ ರಾಜ್ಯಗಳ ಟ್ಯಾಬ್ಲೋಗಳ ಆಕರ್ಷಕ ಪ್ರದರ್ಶನ ದೇಶದ ಸಂಸ್ಕೃತಿಯನ್ನ ಅನಾವರಣ ಗೊಳಿಸಿತ್ತಲ್ಲದೆ, 74ನೇ ಗಣರಾಜ್ಯೋತ್ಸವದ ಸಂಭಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಈ ಬಾರಿ ಒಟ್ಟು 17 ಸ್ತಬ್ಧಚಿತ್ರಗಳು ಪಾಲ್ಗೊಂಡಿದ್ದವು. ಕರ್ನಾಟಕದ ಸ್ತಬ್ಧಚಿತ್ರವು ನಾರಿಯ ಶಕ್ತಿಯನ್ನ ಬಿಂಬಿಸಿ ಗಮನ ಸೆಳೆಯಿತು.

ಪರೇಡ್​ನಲ್ಲಿ ಪಾಲ್ಗೊಂಡ ಆಯಾ ರಾಜ್ಯಗಳ ಸ್ತಬ್ಧಚಿತ್ರಗಳ ಥೀಮ್​ ಇಲ್ಲಿದೆ.

ಆಂಧ್ರ ಪ್ರದೇಶ-ಪ್ರಭಾಲ ತೀರ್ಥಂ: ಮಕರ ಸಂಕ್ರಾಂತಿ ಸಮಯದಲ್ಲಿ ರೈತರ ಹಬ್ಬ

ಅಸ್ಸಾಂ- ವೀರರ ಮತ್ತು ಆಧ್ಯಾತ್ಮಿಕತೆಯ ನಾಡು

ಲಡಾಖ್​- ಪ್ರವಾಸೋದ್ಯಮ ಮತ್ತು ಲಡಾಖ್‌ನ ಸಂಯೋಜಿತ ಸಂಸ್ಕೃತಿ

ಉತ್ತರಾಖಂಡ- ಮಾನಸಖಂಡ

ತ್ರಿಪುರ- ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ತ್ರಿಪುರಾದಲ್ಲಿ ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯ ಮೂಲಕ ಸುಸ್ಥಿರ ಜೀವನೋಪಾಯ

ಗುಜರಾತ್- ಕ್ಲೀನ್ ಗ್ರೀನ್ ಎನರ್ಜಿ ಸಮರ್ಥ ಗುಜರಾತ್

ಜಾರ್ಖಂಡ್- ದಿಯೋಘರ್​ನಲ್ಲಿರುವ ಬಾಬಾಧಾಮ್​ ಬೈದ್ಯನಾಥ ದೇಗುಲ

ಅರುಣಾಚಲ ಪ್ರದೇಶ- ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮದ ನಿರೀಕ್ಷೆಗಳು

ಜಮ್ಮು ಮತ್ತು ಕಾಶ್ಮೀರ- ನಯಾ ಜಮ್ಮು ಮತ್ತು ಕಾಶ್ಮೀರ

ಕೇರಳ- ನಾರಿ ಶಕ್ತಿ

ಪಶ್ಚಿಮ ಬಂಗಾಳ- ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ: ಯುನೆಸ್ಕೋದಿಂದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಬರೆಯುವುದು

ಮಹಾರಾಷ್ಟ್ರ- ಸಾಡೆ ತೀನ್ ಶಕ್ತಿಪೀಠ ಮತ್ತು ನಾರಿ ಶಕ್ತಿ

ತಮಿಳುನಾಡು- ತಮಿಳುನಾಡಿನ ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ

ಕರ್ನಾಟಕ- ನಾರಿಯ ಶಕ್ತಿಯ ಅನಾವರಣ

ಹರಿಯಾಣ- ಅಂತರಾಷ್ಟ್ರೀಯ ಗೀತಾ ಮಹೋತ್ಸವ

ದಾದರ್ ನಗರ ಹವೇಲಿ ಮತ್ತು ದಮನ್ ಮತ್ತು ದಿಯು- ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ

ಉತ್ತರ ಪ್ರದೇಶ- ಅಯೋಧ್ಯೆ ದೀಪೋತ್ಸವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net