

ನವದೆಹಲಿ: ಭಾರತಕ್ಕೆ ಚೊಚ್ಚಲ ಥಾಮಸ್ ಕಪ್ ಗೆಲುವಿಗೆ ಕಾರಣರಾದ ಭಾರತದ ತಂಡದ ಕೋಚ್ಗೆ ಬಾಲಿವುಡ್ ನಟಿ ತಾಪ್ಸಿ ಪನ್ನು ಶುಭಕೋರಿದ್ದಾರೆ.
ಅರೆ..ಏನಿದು ತಾಪ್ಸಿ ಪನ್ನು ಅವರಿಗೂ ಥಾಮಸ್ ಕಪ್ ಗೆಲುವಿಗೂ ಏನು ಕಾರಣ ಎಂಬ ಪ್ರಶ್ನೆ ಮೂಡುವುದು ಸಹಜ. ಹೌದು ಇದಕ್ಕೆ ಉತ್ತರ ಇಲ್ಲಿದೆ.ಬಾಲಿವುಡ್ಗೂ ಕ್ರೀಡೆಗೆ ಹಿಂದಿನಿಂದಲೂ ಬಿಡಿಸಲಾರದ ನಂಟಿದೆ. ಬಾಲಿವುಡ್ ನಟಿಮಣಿಯರು ಕ್ರೀಡೆಯಲ್ಲಿರುವವರ ಪ್ರೀತಿಗೆ ಬಿದ್ದಿರುವುದು ಇದೇ ಮೊದಲೇನಲ್ಲ. ಇಂತಹ ಸಾಲಿನಲ್ಲಿ ನಟಿ ತಾಪ್ಸಿ ಪನ್ನು ಕೂಡ ಸೇರಿದ್ದಾರೆ.
ಅಸಲಿಗೆ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿರುವ ಮಥಿಯಾಸ್ ಬೋ ಅವರು ನಟಿ ತಾಪ್ಸಿ ಪನ್ನು ಇಬ್ಬರು ಸದ್ಯಕ್ಕೆ ಪ್ರೀತಿಯಲ್ಲಿದ್ದಾರೆ. ಇಬ್ಬರು ಇದೇ ವರ್ಷದ ಆರಂಭದಲ್ಲಿ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದರು.
ಸದ್ಯಕ್ಕೆ ಈ ಕೋಚ್ ಯಾರು ಎಂಬುದಕ್ಕೆ ಇಲ್ಲಿದೆ ಮಾಹಿತಿ... ಪ್ರಸ್ತುತ ಭಾರತದ ಪುರುಷರ ಬ್ಯಾಡ್ಮಿಂಟನ್ ತಂಡದ ಕೋಚ್ ಆಗಿರುವ ಮಥಿಯಾಸ್ರ್ಕ್, ಮೂಲದವರು. 2012ರ ಒಲಂಪಿಕ್ಸ್ನಲ್ಲಿ ಬೆಳ್ಳಿ ವಿಜೇತರಾಗಿದ್ದಾರೆ. 2020ರಲ್ಲಿ ನಿವೃತ್ತಿ ಪಡೆದ ಬಳಿಕ ಭಾರತದ ಬ್ಯಾಡ್ಮಿಂಡನ್ ತಂಡದ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.
ಇನ್ನು ಬಾಲಿವುಡ್ ನಟಿ ತಾಪ್ಸಿ ಪನ್ನು ಮತ್ತು ಗೆಳೆಯ ಮಥಿಯಾಸ್ ಬೋ ಇಬ್ಬರು ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬಿ- ಟೌನ್ ನಲ್ಲಿ ದರಿದಾಡುತ್ತಿದೆ. (ಏಜೆನ್ಸೀಸ್)