VIDEO| ಕಬಡ್ಡಿ ಪಂದ್ಯದ ವೇಳೆ ಘರ್ಷಣೆ; ಮೂವರ ಸ್ಥಿತಿ ಗಂಭೀರ

kabaddi Clash
Published on

ನವದೆಹಲಿ: ಕಬಡ್ಡಿ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯುಕೆಯ ಡರ್ಬಿಶೈರ್​ನಲ್ಲಿ ನಡೆದಿದೆ.

ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೂವರು ಗಾಯಾಳುಗಳಿಗೆ ಕತ್ತಿಯಿಂದ ಚುಚ್ಚಿ, ಗುಂಡು ಹಾರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಹಿನ್ನಲೆ

ಯುಕೆಯ ಡರ್ಬಿಶೈರ್​ನಲ್ಲಿರುವ ಡರ್ಬಿ ಕ್ರೀಡಾಂಗಣದಲ್ಲಿ ಸಿಖ್​ ಸಮುದಾಯಕ್ಕೆ ಸೇರಿದ ಎರಡು ತಂಡಗಳು ಕಬಡ್ಡಿ ಪಂದ್ಯವನ್ನು ಆಡುತ್ತಿದ್ದರು. ಪಂದ್ಯದ ವೇಳೆ ಉಭಯ ತಂಡಗಳ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾದ ಪರಿಣಾಮ ಘರ್ಷಣೆ ಏರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಟ ಶುರುವಾಗಿದ್ದು, ಮೂವರು ಆಟಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಯಾವ ಕಾರಣಕ್ಕೆ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿತ್ತು ಎಂದು ತಿಳಿದು ಬಂದಿಲ್ಲ. ಘರ್ಷಣೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಲಾಟೆಗೆ ಸಂಬಂಧಿಸಿದಂತೆ ಯಾರಾದರೂ ಪ್ರತ್ಯಕ್ಷದರ್ಶಿಗಳಿದ್ದರೆ ದಯವಿಟ್ಟು ಮುಂದೆ ಬಂದು ತನಿಖೆಗೆ ಸಹಕರಿಸಿ ಎಂದು ಪೊಲೀಸ್​ ಅಧಿಕಾರಿ ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net