ಊದಿಕೊಂಡ ಕಣ್ಣು, ಬದಲಾದ ಮುಖ ಚಹರೆ.. ನಟಿ ರನ್ಯಾ ರಾವ್​ ಮೇಲೆ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆಯೇ? | Ranya Rao

dk - 2025-03-07T215208.674
Published on

Ranya Rao: ವಿದೇಶದಿಂದ ಆಕ್ರಮವಾಗಿ ಚಿನ್ನತಂದ ಆರೋಪದ ಮೇಲೆ ಸ್ಯಾಂಡಲ್​ವುಡ್​ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾ.03 ರಂದು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಬಳಿಕ ರನ್ಯಾ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿ ನ್ಯಾಯಾಧೀಶರು ಆರೋಪಿತೆಗೆ ಸದ್ಯ ಮಾರ್ಚ್ 18ರ ವರೆಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳು ಹಲ್ಲೆ ಮಾಡಿದ್ದಾರೆಯೇ?

ರನ್ಯಾರಾವ್​ಗೆ ಕಸ್ಟಡಿಯಲ್ಲಿ ಅಧಿಕಾರಿಗಳು ಹಲ್ಲೆ ಮಾಡಿದ್ದಾರೆಯೇ ಎಂದು ಅನುಮಾನ ಶುರುವಾಗಿದೆ. ಇದೀಗ ಇದೆ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಕಾರಣ ಸುಂದರವಾಗಿದ್ದ ಸಾಂಡಲ್​ವುಡ್​ ಹೀರೋಹಿನ್​ನ ಬದಲಾಗಿರುವ ಮುಖದ ಚಹರೆ. ಹೌದು, ಊದಿಕೊಂಡ ಕಣ್ಣುಗಳು ಮತ್ತು ಮೂಗೇಟುಗಳೊಂದಿಗೆ(ಮುಖದ ಚರ್ಮದ ಬದಲಾವಣೆ) ಅವರ ವೈರಲ್ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್​​ ಆಗಿದೆ. ಹೀಗಾಗಿ, ಇದು ಬಂಧನದ ನಂತರ ಅವರ ಮೇಲೆ ಹಲ್ಲೆ ನಡೆದಿದೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ. ಆದರೆ, ಹಲ್ಲೆ ಕುರಿತು ಧೃಢಪಟ್ಟಿಲ್ಲ ಎಂದು ವರದಿ ಉಲ್ಲೇಖಿಸಿವೆ.

ಬಟ್ಟೆಯಲ್ಲಿ ಅಡಗಿಸಿ ಕಳ್ಳಸಾಗಾಣೆ

ನಟಿ ರನ್ಯಾ ಸೋಮವಾರ (ಮಾ.03) ರಾತ್ರಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. ಮೊದಲೇ ಆಕೆಯ ಮೇಲೆ ಅನುಮಾನ ಇದ್ದ ಕಾರಣ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಅವರಿಗೆ ಅಚ್ಚರಿಯೊಂದು ಎದುರಾಗಿತ್ತು. ಅದೇನೆಂದರೆ, ಭಾರಿ ಪ್ರಮಾಣದ ಚಿನ್ನ ರನ್ಯಾ ಬಳಿ ಪತ್ತೆಯಾಯಿತು. ಆಕೆ ತಂದಿದ್ದ 14.8 ಕೆಜಿ ಚಿನ್ನದಲ್ಲಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತಂತೆ. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಸುತ್ತಿ, ಬ್ಯಾಗ್‌ನಲ್ಲಿ ಇಟ್ಟಿರುವುದು ಪತ್ತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರನ್ಯಾ ಅವರು ಡಿಐಜಿ ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳಾಗಿದ್ದಾರೆ. ಅಂದಹಾಗೆ ರನ್ಯಾ ರಾವ್ ಅವರು ನಟ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net