ಸ್ವಿಸ್ ರಾಷ್ಟ್ರೀಯ ಮಂಡಳಿ ನಿಯೋಗದಿಂದ ಈಶ್ವರ ಖಂಡ್ರೆ ಭೇಟಿ|Swiss National Council

ek
Published on

ಬೆಂಗಳೂರು: ಸ್ವಿಟ್ಜರ್ಲೆಂಡ್ ರಾಷ್ಟ್ರೀಯ ಮಂಡಳಿಯ ಸದಸ್ಯ ನಿಕೊಲಸ್ ಸ್ಯಾಮ್ಯುಯಲ್ ಗುಗ್ಗರ್ ನೇತೃತ್ವದ ನಿಯೋಗ ಇಂದು ವಿಕಾಸ ಸೌಧದಲ್ಲಿ ಅರಣ್ಯಸಚಿವ ಈಶ್ವರ ಖಂಡ್ರೆ(Swiss National Council delegation visits Ishwar Khandre) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿತು.

ಮಂಗಳೂರಿನಲ್ಲಿ ಹುಟ್ಟಿ ಬೆಳೆದ ನಿಕೊಲಸ್ ಸ್ಯಾಮ್ಯುಯಲ್ ತಾವು 4 ವರ್ಷದ ಮಗುವಾಗಿದ್ದಾಗಲೇ ಸ್ವಿಟ್ಜರ್ಲೆಂಡ್‌ಗೆ ಹೋಗಿ ಅಲ್ಲಿಯೇ ನೆಲಸಿದ್ದಾಗಿ ತಿಳಿಸಿದರು. ಸ್ವಿಟ್ಜರ್ಲೆಂಡ್‌ನಲ್ಲಿ ಸುಮಾರು 25 ಸಾವಿರ ಭಾರತೀಯರಿದ್ದು, 7 ಸಾವಿರ ಜನರು ಭಾರತೀಯ ಮೂಲದವರು ಮತ್ತು ಭಾರತೀಯ ಸಂಜಾತರಾಗಿದ್ದಾರೆ. ಇವರಲ್ಲಿ ಕನ್ನಡಿಗರೂ ಇದ್ದಾರೆ ಎಂದು ತಿಳಿಸಿದರು.

ಅರಣ್ಯ ಇಲಾಖೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿರುವ ಈಶ್ವರ ಖಂಡ್ರೆ ಅವರನ್ನು ಅಭಿನಂದಿಸಿದ ಅವರು, ಇದೊಂದು ಸೌಹಾರ್ದಯುತ ಭೇಟಿಯಾಗಿದ್ದು, ಸ್ವಿಟ್ಜರ್ಲೆಂಡ್ ಗೆ ಬರುವಂತೆ ಈಶ್ವರ ಖಂಡ್ರೆಗೆ ಆಹ್ವಾನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net