ಕಾಲುವೆಯಲ್ಲಿ ಕಾದು ಕುಳಿತ್ತಿದ್ದ ಜವರಾಯ, ಆಟವಾಡುತ್ತಲೇ ಪ್ರಾಣ ಬಿಟ್ಟ ಮಕ್ಕಳು!

death case
Published on

ವಿಜಯನಗರ: ಆಟವಾಡುತ್ತ ಓದಿಕೊಂಡಿರಬೇಕಿದ್ದ ಮಕ್ಕಳಿಬ್ಬರು ನೀರಾಟ ಆಡುತ್ತಲೇ ಜಲಸಮಾಧಿ ಆದ ಘಟನೆ ಹೊಸಪೇಟೆ ತಾಲೂಕಿನ ಚಿತ್ತವಾಡ್ಗಿಯಲ್ಲಿ ಸಂಭವಿಸಿದೆ.

ಹೊಸಪೇಟೆಯ ಇಂದಿರಾ ನಗರದ ನಿವಾಸಿಗಳಾದ ಯುವರಾಜ್(11) ಮತ್ತು ವೇಣು(10) ಮೃತ ದುರ್ದೈವಿಗಳು. ಇವರಿಬ್ಬರೂ ಚಿತ್ತವಾಡ್ಗಿಯ ಹೊಸೂರು ರಸ್ತೆಯ ಪಕ್ಕದಲ್ಲಿರುವ ರಾಯ ಕಾಲುವೆ ಬಳಿ ಹೋಗಿದ್ದರು. ಇದನ್ನೂ ಓದಿರಿ ಕೂಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೊರಟವರ ಪ್ರಾಣ ಹೊತ್ತೊಯ್ದ ಜವರಾಯ!

‘ಈಜಾಡಲೆಂದು ಕಾಲುವೆಗಿಳಿದಿದ್ದ ಬಾಲಕರಿಬ್ಬರೂ ವಾಪಸ್​ ಮನೆಗೆ ಬಂದಿರಲಿಲ್ಲ. ಕುಟುಬಂಸ್ಥರು ಮತ್ತು ಸ್ಥಳೀಯರು ಕಾಲುವೆಯಲ್ಲಿ ಹುಡುಕಾಡಿದಾಗ ಮಕ್ಕಳ ಶವಗಳು ಪತ್ತೆಯಾಗಿವೆ. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net