ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸ್ವಿಗ್ಗಿ ಬಾಯ್ ಸ್ಥಳದಲ್ಲೇ ಸಾವು

Swiggy
Published on

ಬೆಂಗಳೂರು: ವರ್ತರು ಕೆರೆ ಬಳಿ ಬೈಕ್​ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಸಿಗ್ವಿಬಾಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಸ್ಸಾಂ ಮೂಲದ ಜೈಬೂರ್ ರೆಹಮಾನ್ ಚೌಧರಿ (25) ಮೃತಪಟ್ಟವ.

ರೆಹಮಾನ್ ಚೌಧರಿ ಗುರುವಾರ ರಾತ್ರಿ 7.20ರಲ್ಲಿ ವೈಟ್​ಫೀಲ್ಡ್​ನಿಂದ ವರ್ತರು ಕಡೆ ಪಲ್ಸರ್ ಬೈಕ್​ನಲ್ಲಿ ಗ್ರಾಹಕರಿಗೆ ಕೊಡಲು ಆಹಾರ ತೆಗೆದುಕೊಂಡು ಹೋಗುತ್ತಿದ್ದ. ವೈಟ್​ಫೀಲ್ಡ್​ಗೆ ದ್ರಾಕ್ಷಿ ತೆಗೆದುಕೊಂಡು ಹೋಗುತ್ತಿದ್ದ ಗೂಡ್ಸ್ ವಾಹನವು ವರ್ತರು ಕೆರೆ ಬಳಿ ಬೈಕ್​ಗೆ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಚೌಧರಿ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಗೂಡ್ಸ್ ವಾಹನಕ್ಕೆ ಬೈಕ್ ಸಿಲುಕಿ ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಆಗ ಬೆಂಕಿ ಉಂಟಾಗಿ ಬೈಕ್ ಸುಟ್ಟು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೂಡ್ಸ್ ವಾಹನವನ್ನು ಅಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net