ಸ್ವಾತಿ ಕೊಲೆ ಆರೋಪಿಗಳಿಗೆ ಕಠಿಣ ಶಿೆ ವಿಧಿಸಲು ಆಗ್ರಹ

16-RNR-05
Published on

ರಾಣೆಬೆನ್ನೂರ: ಮಾಸೂರಿನ ಸ್ವಾತಿ ಕೊಲೆ ಆರೋಪಿಗಳಿಗೆ ಕಠಿಣ ಶಿೆ ಕೊಡಬೇಕು ಎಂದು ಆಗ್ರಹಿಸಿ ಇಲ್ಲಿಯ ಶ್ರೀರಾಮ ನಗರದ ಬಾಲಕಿಯರ ವಸತಿ ನಿಲಯದ ಎದುರು ಭಾರತ ವಿದ್ಯಾಥಿರ್ ಫೆಡರೇಷನ್​ (ಎಸ್​ಎಫ್​ಐ) ತಾಲೂಕು ಸಮಿತಿ ವತಿಯಿಂದ ಶನಿವಾರ ಸಂಜೆ ಪ್ರತಿಭಟನೆ ನಡೆಸಲಾಯಿತು.

ಸಂಟನೆಯ ಜಿಲ್ಲಾಧ್ಯಕ್ಷ ಬಸವರಾಜ ಎಸ್​. ಮಾತನಾಡಿ, ಸ್ವಾತಿ ಕೊಲೆ ಪ್ರಕರಣದ ಮೂವರು ಆರೋಪಗಳಿಗೆ ನ್ಯಾಯಾಲಯವು ಸಮಗ್ರ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಜಿಲ್ಲೆಯಲ್ಲಿ ವಿದ್ಯಾಥಿರ್ನಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸಬೇಕು. ದುರುಳರಿಂದ ಕೊಲೆಯಾಗಿರುವ ಸ್ವಾತಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿದರು.

ಸಂಟನೆಯ ತಾಲೂಕು ಅಧ್ಯಕ್ಷ ಗೌತಮ್​ ಸಾವಕ್ಕನವರ, ಉಪಾಧ್ಯಕ್ಷ ಬಸವರಾಜ ಕೊಣಸಾಲಿ, ಮಹೇಶ ಮರೋಳ, ಸಹಕಾರ್ಯದಶಿರ್ ಕೃಷ್ಣ ನಾಯ್ಕ, ಧನುಷ ದೊಡ್ಮನಿ, ತೇಜಸ್​ ಎನ್​.ಡಿ., ನೀಲಮ್ಮ ಕಡಕೋಳ, ಸುಮತಿ ಕರೆಯಣ್ಣನವರ, ರಾಧಿಕಾ ಹೊನ್ನಪ್ಪನವರ, ನಾಗರತ್ನ ಸಿ.ಎಸ್​., ಕಾವ್ಯ ರಾಠೋಡ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net