ಆಸ್ಕರ್ ರೇಸ್‌ನಲ್ಲಿ ‘ಸ್ವಾತಂತ್ರ್ಯವೀರ ಸಾರ್ವಕರ್’ : ಸ್ಪರ್ಧೆಗೆ ಪರಿಗಣಿಸುವಂತೆ ಸ್ವತಂತ್ರವಾಗಿ ಅರ್ಜಿ ಸಲ್ಲಿಸಿದ ಚಿತ್ರತಂಡ

veer 1
Published on

ಅಮಿರ್ ಖಾನ್ ನಿರ್ಮಾಣದ ಹಾಗೂ ಕಿರಣ್ ರಾವ್ ನಿರ್ದೇಶನದ ಹಿಂದಿಯ ‘ಲಾಪತಾ ಲೇಡೀಸ್’ ಸಿನಿಮಾವು ‘ಉತ್ತಮ ವಿದೇಶಿ ಚಿತ್ರ’ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಆಯ್ಕೆ ಮಾಡಲಾಗಿದೆ. ಸ್ಪರ್ಧೆಯಲ್ಲಿದ್ದ 29 ಚಿತ್ರಗಳ ಪೈಕಿ ಫಿಲಂ ೆಡರೇಷನ್ ಆ್ ಇಂಡಿಯಾ ಅಂತಿಮವಾಗಿ ‘ಲಾಪತಾ ಲೇಡೀಸ್’ ಚಿತ್ರವನ್ನು ಅಧಿಕೃತವಾಗಿ ಆಯ್ಕೆ ಮಾಡಿದೆ. ಇದೀಗ, ‘ಸ್ವಾತಂತ್ರ್ಯವೀರ ಸಾವರ್ಕರ್’ ಚಿತ್ರವನ್ನೂ ಆಸ್ಕರ್‌ಗೆ ಪರಿಗಣಿಸುವಂತೆ, ಚಿತ್ರತಂಡ ಅರ್ಜಿ ಸಲ್ಲಿಸಿದೆ. ಬಾಲಿವುಡ್ ನಟ ರಣದೀಪ್ ಹೂಡಾ ಚೊಚ್ಚಲ ಬಾರಿಗೆ ನಿರ್ದೇಶಿಸಿ, ಸಾವರ್ಕರ್ ಪಾತ್ರದಲ್ಲಿ ನಟಿಸಿದ್ದ ಚಿತ್ರವಿದು. ಭಾರತದಿಂದ ಅಧಿಕೃತ ಎಂಟ್ರಿಗೆ ರೇಸ್‌ನಲ್ಲಿದ್ದ 29 ಚಿತ್ರಗಳಲ್ಲಿ ಈ ಸಿನಿಮಾ ಇತ್ತಾದರೂ, ಆಯ್ಕೆಯಾಗಿರಲಿಲ್ಲ. ಇದೀಗ ಚಿತ್ರತಂಡವು ಸ್ವತಂತ್ರವಾಗಿ ಸ್ಪರ್ಧೆಗೆ ಚಿತ್ರವನ್ನು ಪರಿಗಣಿಸುವಂತೆ ಆಸ್ಕರ್‌ಗೆ ಅರ್ಜಿ ಸಲ್ಲಿಸಿದ್ದು, ಈ ಸಂಗತಿಯನ್ನು ಸ್ವತಃ ಚಿತ್ರತಂಡವೇ ೋಷಿಸಿಕೊಂಡಿದೆ. -ಏಜೆನ್ಸೀಸ್

ಎರಡು ಸಿನಿಮಾ ಸಲ್ಲಿಸಬಹುದು: ಒಂದು ದೇಶದಿಂದ ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಸಲ್ಲಿಸಬಹುದೇ ಎಂಬ ಪ್ರಶ್ನೆ ಹಲವರಲ್ಲಿ ಮೂಡಬಹುದು. ಫಿಲಂ ೆಡರೇಷನ್ ಆ್ ಇಂಡಿಯಾದಿಂದ ಅಧಿಕೃತವಾಗಿ ಆಸ್ಕರ್‌ಗೆ ಒಂದು ಚಿತ್ರವನ್ನಷ್ಟೇ ಕಳುಹಿಸಲಾಗುತ್ತದೆ. ಆದರೆ, ಬೇರೆ ಚಿತ್ರತಂಡಗಳು ಸ್ವತಂತ್ರವಾಗಿ ಆಸ್ಕರ್‌ಗೆ ಚಿತ್ರವನ್ನು ಸಲ್ಲಿಸುವ ಅವಕಾಶವೂ ಇದೆ. 2022ರಲ್ಲಿ ಭಾರತದಿಂದ ಆಸ್ಕರ್‌ಗೆ ‘ಛೆಲ್ಲೋ ಶೋ’ ಎಂಬ ಗುಜರಾತಿ ಚಿತ್ರವನ್ನು ಆಯ್ಕೆ ಮಾಡಲಾಗಿತ್ತು. ಆಗ ರಾಜಮೌಳಿ ನಿರ್ದೇಶನದ ‘ಆರ್‌ಆರ್ ಆರ್’, ಸಂಜಯ್ ಲೀಲಾ ಬನ್ಸಾಲಿಯ ‘ಗಂಗೂಬಾಯಿ ಕಾಥಿಯಾವಾಡಿ’ ಚಿತ್ರತಂಡಗಳು ಸ್ವತಂತ್ರವಾಗಿ ಆಸ್ಕರ್‌ಗೆ ಅರ್ಜಿ ಸಲ್ಲಿಸಿದ್ದವು. ಆ ವರ್ಷ, ‘ಆರ್‌ಆರ್‌ಆರ್’ನ ‘ನಾಟು… ನಾಟು..’ ಹಾಡಿಗೆ ಅತ್ಯುತ್ತಮ ಸಂಗೀತ ಆಸ್ಕರ್ ಪ್ರಶಸ್ತಿ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net