ಸ್ವಾಮಿ ವಿವೇಕಾನಂದರ ತತ್ವ ಚಿಂತನೆ ಅಳವಡಿಸಿಕೊಳ್ಳಿ; ನಾರಾಯಣ

20-RNR-05
Published on

ರಾಣೆಬೆನ್ನೂರ: ವಿದ್ಯಾಥಿರ್ಗಳು ಸ್ವಾಮಿ ವಿವೇಕಾನಂದರ ತತ್ವ, ಆದರ್ಶ ಚಿಂತನೆಗಳನ್ನು ಅಳವಡಿಸಿಕೊಂಡು ಭಾರತೀಯ ಪರಂಪರೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಪ್ರಾಚಾರ್ಯ ನಾರಾಯಣ ನಾಯಕ ಹೇಳಿದರು.

ಸ್ವಾಮಿ ವಿವೇಕಾನಂದರ 162ನೇ ಜಯಂತಿ ಅಂಗವಾಗಿ ನಗರದ ಕೆಎಲ್​ಇ ರಾಜ ರಾಜೇಶ್ವರಿ ಮಹಾವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಯುವ ಜನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಂಸತಿಕ ಸ್ಪರ್ಧೆಗಳು ಮನರಂಜನೆಗೆ ಮಾತ್ರವಲ್ಲ. ಅದು ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾದ ಕೌಶಲಗಳನ್ನು ಅಭಿವೃದ್ದಿಪಡಿಸುವುದರ ಜತೆಗೆ ಹೊಸ ಕೌಶಲಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಜೀವನ ನಡೆಸಲು ಸಾಧ್ಯ ಎಂದರು.

ಕಾರ್ಯಕ್ರಮ ಸಂಯೋಜಕ ಹೇಮಗಿರಿ ಅಂಗಡಿ, ರೇಖಾ ಶಿಡೇನೂರ, ಶೋಭಾ ಡೊಡ್ಡನಾಗಳ್ಳಿ, ವಾಣಿಶ್ರೀ ಪಾಟೀಲ, ಮಂಜಪ್ಪ ಸಿ.ಎಸ್​., ಭೀಮಾರತಿ ತೀರ್ಥ, ಕವಿತಾ ಗಡ್ಡದಗೂಳಿ, ವೀರೇಶ ಕುರಹಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net