ಸ್ವಚ್ಛತಾ ಸೇವಾ ಅಭಿಯಾನ; ಅಕ್ಟೋಬರ್ 02 ರವರೆಗೆ ನಡೆಯಲಿರುವ ಚಟುವಟಿಕೆಗಳ ಪಟ್ಟಿ ಹೀಗಿದೆ

Untitled design - 2023-09-26T180739.782
Published on

ಬೆಂಗಳೂರು: ರಾಜ್ಯದಲ್ಲಿ ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 02, 2023 ರವರೆಗೆ ಎಸ್​ಎಚ್​ಎಸ್​ ಅಭಿಯಾನವು DDWS-GoIನ ಸಲಹೆಯಂತೆ ಪ್ರಾರಂಭಿಸಲಾದ "ಕಸ ಮುಕ್ತ ಭಾರತ" ಪ್ರಚಾರ ಕಾರ್ಯವನ್ನು ಕೈಗೊಂಡಿದ್ದು, ಈ ಮಧ್ಯೆ ನಡೆಯಲಿರುವ ಕೆಲವು ಸ್ವಚ್ಛತಾ ಚಟುವಟಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಲ್ಲಾ ಇಲಾಖೆಗಳು ತಮ್ಮ ತಮ್ಮ ಪ್ರದೇಶಗಳಿಗೆ ಸಂಬಂಧಿಸಿದಂತೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲು ಮತ್ತು ಕೆಲವು ಕಾರ್ಯಗಳಲ್ಲಿ ಒಮ್ಮುಖವಾಗುವಂತೆ ಸೂಚಿಸಲಾಗಿದ್ದು, ಆಯುಕ್ತರು, ಆರ್‌ಡಿಡಬ್ಲ್ಯೂಎಸ್‌ಡಿ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸ್ವಚ್ಛತಾ ಅಭಿಯಾನದೊಂದಿಗೆ ರಾಜ್ಯಾದ್ಯಂತ ಅಭಿಯಾನವನ್ನು ವಿಸ್ತರಿಸಲು ಮತ್ತು ಪ್ರತಿದಿನ ಆಯೋಜಿಸಲಾದ ಕಾರ್ಯಕ್ರಮವನ್ನು ನಡೆಸಲಿದೆ.

ಸರ್ಕಾರಿ ಕಛೇರಿ, ಶಾಲಾ ಆವರಣ, ಬಸ್ ನಿಲ್ದಾಣ, ಮಾರುಕಟ್ಟೆ, ರಸ್ತೆ ಬದಿಯ ಪ್ರದೇಶಗಳು, ಉದ್ಯಾನವನ ಮತ್ತು ಜಲಮೂಲಗಳ ಮೂಲಸೌಕರ್ಯಗಳನ್ನು ಸ್ವಚ್ಛಗೊಳಿಸುವಂತಹ ಚಟುವಟಿಕೆಗಳಿಗೆ ಶ್ರಮದಾನಕ್ಕೆ ಆದ್ಯತೆ ನೀಡಲಾಗಿದೆ. ಮಕ್ಕಳಲ್ಲಿ ವರ್ತನೆಯ ಬದಲಾವಣೆಯನ್ನು ಬೆಳೆಸುವ ಪ್ರಾಮುಖ್ಯತೆಯನ್ನು ತರಲು ಶಾಲಾ ಮಕ್ಕಳ ಭಾಗವಹಿಸುವಿಕೆಯೊಂದಿಗೆ ಸಾಮೂಹಿಕ ಜಾಗೃತಿ ಅಭಿಯಾನಗಳು ಮತ್ತು ಚಟುವಟಿಕೆಗಳನ್ನು ಯೋಜಿಸಲಾಗಿದೆ.

  • ಬಸ್​ ತಂಗುದಾಣ ಸ್ವಚ್ಛತಾ ಅಭಿಯಾನ
  • ಸರ್ಕಾರಿ ಶಾಲಾ ಆವರಣ ಸ್ವಚ್ಛತಾ ಅಭಿಯಾನ
  • ಸಸಿ ನೆಡುವ ಅಭಿಯಾನ
  • ದೇವಾಲಯದ ಕಲ್ಯಾಣಿ ಸ್ವಚ್ಛತಾ ಅಭಿಯಾನ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net