ರಸ್ತೆ ಅಪಘಾತದಲ್ಲಿ ಆಟೋ ಜರ್ನಲಿಸ್ಟ್​ ಸುವಿಲ್ ಸುಸ್ವಿರ್ಕರ್ ದುರ್ಮರಣ!

Untitled design - 2023-08-17T144948.226
Published on

ಹಿಮಾಚಲ ಪ್ರದೇಶ: ಖ್ಯಾತ ಆಟೋ​ ಪತ್ರಕರ್ತ ಸುವಿಲ್ ಸುಸ್ವಿರ್ಕರ್ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂತಾಪ ಸೂಚಿಸಿರುವ ಟಿವಿಎಸ್ ಮೋಟಾರ್ ಕಂಪನಿ, ಭಾರೀ ಮಳೆ ಮತ್ತು ಭೂಕುಸಿತದಿಂದ ಹಿಮಾಚಲ ಪ್ರದೇಶದ ರಸ್ತೆಗಳು ಹಾಳಾಗಿದೆ. ಸುವಿಲ್​ ಅವರು ಕಾಜಾಗೆ ತೆರಳುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ.

"ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿ ಪಾತ್ರರಿಗೆ ನಮ್ಮ ಸಂತಾಪಗಳು. ಅಪಘಾತ ಸಂಭವಿಸಿದಾಗ ಬೆಂಗಾವಲು ಪಡೆಯ ಭಾಗವಾಗಿದ್ದ ಮೊಬೈಲ್ ಆಂಬ್ಯುಲೆನ್ಸ್‌ನಲ್ಲಿ ವೈದ್ಯರು ಸುಸ್ವಿರ್ಕರ್‌ ಅವರಿಗೆ ತುರ್ತು ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ" ಎಂದು ಟಿವಿಎಸ್ ಸಂಸ್ಥೆ ಹೇಳಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಟಿವಿಎಸ್ ಪುಟ ಹಂಚಿಕೊಂಡಿಲ್ಲ.

ಈ ದುರ್ಘಟನೆ ಕಂಪನಿಯು ಆಯೋಜಿಸಿದ್ದ ರೈಡ್‌ ವೇಳೆ ಸಂಭವಿಸಿದೆ ಎಂದು ಹೇಳಲಾಗಿದೆ. ಸುವಿಲ್ ಸುಸ್ವಿರ್ಕರ್ ಬೈಕ್‌ವೇಲ್‌ನಲ್ಲಿ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 16 ರಂದು ಹಿಮಾಚಲ ಪ್ರದೇಶದ ನರಕಂದ-ಕಲ್ಪಾ ಮಾರ್ಗದಲ್ಲಿ ಮಾಡಿದ ಬೈಕಿಂಗ್ ವಿಡಿಯೋ ಅವರ ಕೊನೆಯ ಇನ್​ಸ್ಟಾಗ್ರಾಮ್​ ಪೋಸ್ಟ್ ಆಗಿದೆ. ಸುಸ್ವೀರ್ಕರ್ ಅವರ ಅಕಾಲಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸಂತಾಪದ ಸಂದೇಶಗಳು ಹರಿದುಬಂದಿವೆ.

"ಈ ದುರಂತ ತಂದ ನೋವು ಮತ್ತು ದುಃಖವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಪರಸ್ಪರ ಒಂದಾಗಿ ನಿಲ್ಲುತ್ತೇವೆ" ಎಂದು ಟಿವಿಎಸ್ ಸಂಸ್ಥೆ ಪೋಸ್ಟ್​ನಲ್ಲಿ ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net