ಇಬ್ಬರು ಇಂಜಿನಿಯರ್​ಗಳ ಅಮಾನತು

suspended
Published on

ಕೋಲಾರ: ಕರ್ತವ್ಯ ಲೋಪ ಎಸಗಿದ ಆರೋದಲ್ಲಿ ಪಂಚಾಯತ್​ ರಾಜ್​ ಇಲಾಖೆಯ ಇಬ್ಬರು ಇಂಜಿನಿಯರ್​ಗಳನ್ನು ಅಮಾನತುಗೊಳಿಸಿ ಇಲಾಖೆ ಕಾರ್ಯದರ್ಶಿ ಎಂ.ಚೇತನ ಆದೇಶಿಸಿದ್ದಾರೆ.

ಜಿಲ್ಲೆಯ ಮಾಲೂರು ತಾಲೂಕಿನ ಸಂತೇಹಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಪ್ರಿಯಾಂಕ್​ ರ್ಖಗೆ ಶಾಸಕರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಚರ್ಚಿಸಿದ್ದರು. ಆದರೆ, ಸಚಿವರು ಆಗಮಿಸುವ ಮಾಹಿತಿ ಇದ್ದರೂ ಇಂಜಿನಿಯರ್​ಗಳು ಗೈರಾಗಿ ಬೇಜವಾಬ್ದಾರಿ ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಇಂಜಿನಿಯರ್​ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪಾಲ ಅಭಿಯಂತ ಕೆ.ರವೀಂದ್ರ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯದ ಉಪ ವಿಭಾಗದ ಸಕಾಯದ ಕಾರ್ಯಪಾಲ ಸಿ.ಜಬೀಉಲ್ಲಾ ಅವರನ್ನು ಅಮಾನತು ಮಾಡಿ, ಬಳಿಕ ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದು, ಕಾರ್ಯಸ್ಥಾನ ಬಿಟ್ಟು ಹೋಗದಂತೆಯೂ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net