

ಕಡೂರು: ಕಡೂರು ಪೊಲೀಸ್ ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆ ವಿರೋಧಿಸಿ ಮಹಿಳಾ ಪೋಲೀಸ್ ಪೇದೆ ಲತಾ ಎಂಬುವವರು ಶಾಸಕರ ವಿರುದ್ಧ ವಾಟ್ಸಾಪ್ ಸ್ಟೇಟಸ್ ಹಾಕಿದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತ್ತು ಮಾಡಿ ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶ ಹೊರಡಿಸಿದ್ದಾರೆ.
ಕಡೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಪೇದೆ ಲತಾ ಎಂಬುವವರು ದ್ವೇಷದ ವರ್ಗಾವಣೆ ಕುರಿತು ಶಾಸಕ ಆನಂದ್ ಅವರ ವಿರುದ್ಧವೇ ಮೌನ ಸಮರದ ಮೂಲಕ ಆಕ್ರೋಶ ಹೊರಹಾಕಿರುವ ಸ್ಟೇಟಸ್ ವೈರಲ್‌ಆಗಿದೆ.
ವಾಟ್ಸ್‌ಪ್ ಸ್ಟೇಟಸ್‌ನಲ್ಲೇನಿದೆ?: ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ವಾಟ್ಸ್‌ಫ್ ಸ್ಟೇಟಸ್ ಹಾಕಿಕೊಂಡಿರುವ ಮಹಿಳಾ ಪೇದೆ ನನಗೆ ಏನಾದರೂ ತೊಂದರೆಯಾದರೆ ಎಂಎಲ್‌ಎ ಕಾರಣ. ಕಡೂರು ಎಂಎಲ್‌ಎಗೆ ನನ್ನ ಕಡೆಯಿಂದ ಧಿಕ್ಕಾರವಿರಲಿ ಎಂದು ಬರೆದುಕೊಂಡಿದ್ದಾರೆ.