ಶೀಲ ಶಂಕಿಸಿ ಪತ್ನಿಗೆ ಚಾಕುವಿನಿಂದ ಇರಿದಿದ್ದ ಪತಿಯ ಬಂಧನ

arrested
Published on

ಬೆಂಗಳೂರು: ಪತ್ನಿಗೆ ಅಕ್ರಮ ಸಂಬಂಧವಿದೆಯೆಂದು ಶಂಕಿಸಿ ಚಾಕುವಿನಿಂದ ಇರಿದಿದ್ದ ಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಮೂಲತಃ ಚನ್ನಪಟ್ಟಣ ಹಾಗೂ ಜೆಪಿ ನಗರದ ೫ನೇ ಹಂತದ ವಿನಾಯಕ ನಗರದ ನಿವಾಸಿ ನವೀನ್ ಬಂಧಿತ ಆರೋಪಿ.


ಜೆ.ಪಿ ನಗರದಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಿರುವ ಮಹಿಳೆಯೊಬ್ಬರು ಎಚ್.ಎಸ್.ಆರ್ ಲೇಔಟ್‌ನ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕೆಲಸದ ವಿಚಾರವಾಗಿ ಮಾತನಾಡಲು ಸಹೊದ್ಯೋಗಿಯಾಗಿರುವ ಮಹಿಳೆಯ ಮನೆಗೆ ಮಾ.೩೧ ರಂದು ಬಂದಿದ್ದರು ಎನ್ನಲಾಗಿದೆ. ಅದೇ ವೇಳೆಗೆ ಆಟೋ ತೆಗೆದುಕೊಂಡು ಹೊರಗೆ ಹೋಗಿದ್ದ ಮಹಿಳೆಯ ಪತಿ ಮನೆಗೆ ಬಂದಾಗ ವ್ಯಕ್ತಿಯನ್ನು ಕಂಡು ಆಕ್ರೋಶಗೊಂಡು ಪತ್ನಿ ಜತೆ ಜಗಳವಾಡಿ ಅಕ್ರಮ ಸಂಬಂಧದ ಶಂಕೆ ವ್ಯಕ್ತಪಡಿಸಿ ಚಾಕುವಿನಿಂದ ಮೊಣ ಕೈಗೆ ಹಲ್ಲೆ ನಡೆಸಿ ಇರಿದಿದ್ದಾನೆ. ಗಾಯಗೊಂಡ ಮಹಿಳೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದ್ದು, ಆರೋಪಿ ಜಾಮೀನು ಪಡೆದು ಬಿಡುಗಡೆಯಾಗಿದ್ದಾನೆ. ಎರಡು ಕುಟುಂಬ ಸದಸ್ಯರು ಮಾತು ಕಥೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net