

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬೆಳ್ಳಾರೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿದೆ. ಇದರೊಂದಿಗೆ ಬಂಧಿತ ಆರೋಪಿಗಳ ಪಟ್ಟಿ 19ಕ್ಕೆ ಏರಿಕೆಯಾಗಿದೆ.
ವಿದೇಶಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಾಗ ರಿಯಾಜ್ ಯೂಸುಫ್ ಹಾರಳ್ಳಿ ಅಲಿಯಾಸ್ ರಿಯಾಝ್ ಎಂಬಾತನನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡದ ಸುಳ್ಯದ ಬಂಧಿತ ಮುಸ್ತಾಷಾ ಫೈಜಾರ್ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದ ಮನ್ಸೂರ್ ಪಾಷಾ ಬಂಧನದ ಬಳಿಕ ಒಂದೇ ತಿಂಗಳಲ್ಲಿ ರಿಯಾಜ್ ಯೂಸ್ುನ್ನು ಪತ್ತೆಹಚ್ಚಲಾಗಿದೆ ಎಂದು ಎಂದು ಎನ್‌ಐಎ ತಿಳಿಸಿದೆ.
ತಲೆಮರೆಸಿಕೊಂಡಿರುವ ಶಂಕಿತ ಅಬ್ದುಲ್ ರಹಮಾನ್ ಸೂಚನೆ ಮೇರೆಗೆ ವಿದೇಶದಿಂದ ರಿಯಾಜ್ ರಾಜ್ಯಕ್ಕೆ ಬಂದು ಮಸ್ಸೂರ್ ಪಾಷಾ ಜತೆ ಸೇರಿಕೊಂಡು ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ. ಅಲ್ಲದೆ, ಪ್ರವೀಣ್ ನೆಟ್ಟಾರು ಕೊಲೆಗೆ ಬೇಕಾದ ಮಾರಕಾಸಗಳನ್ನು ಲಾಜಿಸ್ಟಿಕ್ ಮತ್ತು ಕೊಲೆ ಮಾಡಿ ಬಂದವರಿಗೆ ಸುರಕ್ಷಿತ ಅಡಗುತಾಣ ಒದಗಿಸಿದ್ದ.
ಕೃತ್ಯದ ಪ್ರಮುಖ ಆರೋಪಿಯಾದ PFI ಪುತ್ತೂರು ಜಿಲ್ಲಾ ಘಟಕ ಕಾರ್ಯದರ್ಶಿ ಮುಸ್ತಾ, ಫ್ರೀಡಂ ಕಮ್ಯುನಿಟಿ ಹಾಲ್‌ನಲ್ಲಿ ಪಿಎಫ್‌ಐ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು ಉಗ್ರ ದಾಳಿಗೆ ಸಜ್ಜುಗೊಳಿಸುವಲ್ಲಿ ತೊಡಗಿಸಿಕೊಂಡಿದ್ದ. ಹಿಂದು ಮುಖಂಡರನ್ನೇ ಗುರಿಯಾಗಿ ಇರಿಸಿಕೊಂಡು ಹತ್ಯೆ ಮಾಡಲು ದೊಡ್ಡ ಪಿತೂರಿ ನಡೆಸಿದ್ದರು. ಇದಕ್ಕೆ ‘ಹಿಟ್ ಸರ್ವೀಸ್ ಟೀಮ್’ ರಚಿಸಿದ್ದ. ಈತನ ಸೂಚನೆ ಮೇರೆಗೆ ಹಿಟ್ ಸರ್ವೀಸ್ ಟೀಮ್ ಪ್ರವೀಣ್ ನೆಟ್ಟಾರುನನ್ನು ಸಾರ್ವಜನಿಕ ಸ್ಥಳದಲ್ಲಿ ಮಾರಕಾಸಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ದಾಳಿ ಮೂಲಕ ಸಮಾಜದಲ್ಲಿ ಜನರಲ್ಲಿ ಉಗ್ರರರ ಸಂದೇಶ ಸಾರುವುದು ಗುರಿಯಾಗಿತ್ತು. ಮೇ 10ರಂದು ಬಂಧಿಸಲಾಗಿತ್ತು.
2022ರ ಜುಲೈನಲ್ಲಿ ದ್ವಿಚಕ್ರ ವಾಹನದಲ್ಲಿ ಇಬ್ಬರು ಬಂದು ಪ್ರವೀಣ್ ನೆಟ್ಟಾರುನನ್ನು ಬರ್ಬರವಾಗಿ ಕೊಲೆ ಮಾಡಿದ್ದರು. 2022ರ ಆಗಸ್ಟ್ 4ರಂದು ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಂಡಿತ್ತು. 21 ಆರೋಪಿಗಳನ್ನು ಬಂಧಿಸಿ ಜನವರಿ 2023ರಲ್ಲಿ ಎನ್‌ಐಎ ವಿಶೇಷ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಇದರಲ್ಲಿ 8 ಮಂದಿ ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದರು. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.