ಯುಯುಸಿಎಂಎಸ್ ಹ್ಯಾಕ್ ಶಂಕೆ

klr bnu
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
Published on

ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಯದಲ್ಲಿ ಯುನಿಫೈಡ್ ಯೂನಿವರ್ಸಟಿ ಕಾಲೇಜ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಯುಯುಸಿಎಂಎಸ್) ಹ್ಯಾಕ್ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿ ವಿವಿಯ ಕುಲಸಚಿವ (ಮೌಲ್ಯಮಾಪನ) ಡಾ.ತಿಪ್ಪೇಸ್ವಾಮಿ ಪೊಲೀಸರಿಗೆ ದೂರು ನೀಡಿದ್ದಾರೆ.

ದುಡ್ಡು ಕೊಟ್ಟರೆ ಫೇಲಾದವರನ್ನು ಪಾಸ್ ಮಾಡಲಾಗುತ್ತದೆ ಎಂಬ ಆಪಾದನೆ ವಿವಿಯ ಮೇಲೆ ಕೇಳಿ ಬಂದಿತ್ತು. ಇದರಿಂದಾಗಿ ವಿವಿಯ ಅಽಕಾರಿಗಳಿಗೆ ತೀವ್ರ ಮುಜುಗರ ಉಂಟು ಮಾಡಿತ್ತು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯು ಯುಯುಸಿಎಂಎಸ್ ತಂತ್ರಾಂಶವನ್ನು ಜಾರಿಗೊಳಿಸಿದೆ. ಪರೀಕ್ಷಾ ಶುಲ್ಕ, ಫಲಿತಾಂಶ, ನೋಂದಣಿ, ಮರು ಮೌಲ್ಯಮಾಪನ ಸೇರಿ ವಿವಿಧ ಸೇವೆಗಳು ತಂತ್ರಾಂಶದಲ್ಲಿ ದೊರಕಿಸಲಾಗಿದೆ.
ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದ ಫೇಲಾದ ವಿದ್ಯಾರ್ಥಿಯನ್ನು ಪಾಸ್ ಮಾಡಿ ಹಣ ಪಡೆಯಲು ಬಂದ ವ್ಯಕ್ತಿಯನ್ನು ವಿದ್ಯಾರ್ಥಿಗಳೇ ಪೊಲೀಸರಿಗೆ ಹಿಡಿದುಕೊಟ್ಟಿರುವುದು ಕಂಡುಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕುಲಸಚಿವರು ದೂರು ನೀಡಿದ್ದಾರೆ.
ತನಿಖೆ ಪ್ರಗತಿಯಲ್ಲಿ
ತಂತ್ರಾಂಶ ಹ್ಯಾಕಿಂಗ್ ಮಾಡಿರುವುದು ಕಂಡುಬAದಿಲ್ಲ. ಬೆಂಗಳೂರು ಉತ್ತರ ವಿವಿಯ ಯುಸಿಸಿಎಂಎಸ್ ಹ್ಯಾಕ್ ಆಗಿ ಲಾಗಿನ್ ಆಗಲು ತೊಂದರೆಯಾಗುತ್ತಿದೆ ಎಂದು ಕುಲಚಿವರು ದೂರು ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಹ್ಯಾಕ್ ಆಗಿಲ್ಲ ಎಂಬುದು ಕಂಡುಬಂದಿದೆ. ತಂತ್ರಾಂಶವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅಽಕಾರಿಗಳು ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net