ಸುಷ್ಮಿತಾ ಪತಿ ಸೇರಿ ಮೂವರ ಸೆರೆ

crime new (2)
Published on

ಬೆಂಗಳೂರು: ನಾಗರಬಾವಿಯಲ್ಲಿ ಫೆ.16 ರಂದು ನಡೆದಿದ್ದ ಹಿನ್ನೆಲೆ ಗಾಯಕಿ ಸುಷ್ಮಿತಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ದಿನಗಳ ಬಳಿಕ ಆಕೆಯ ಪತಿ ಸೇರಿ ಮೂವರನ್ನು ಅನ್ನಪೂರ್ಣೆಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

ಸುಷ್ಮಿತಾ ಪತಿ ಶರತ್ ಕುಮಾರ್, ಆತನ ಸಹೋದರಿ ಗೀತಾ ಹಾಗೂ ಆತನ ದೊಡ್ಡಮ್ಮ ವೈದೇಹಿ ಬಂಧಿತರು. ರಾತ್ರಿ ಸುಷ್ಮಿತಾ ನಾಗರಬಾವಿಯಲ್ಲಿನ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿಚಾರ ತಿಳಿದ ಆರೋಪಿಗಳು ಪಾಂಡವಪುರದ ಸಂಬಂಧಿಕರ ಮನೆಯಲ್ಲಿ ತಲೆಮರೆಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.16ರಂದು ತಾಯಿ ಮೀನಾಕ್ಷಿ ಮನೆಯಲ್ಲಿ ಇರಲಿಲ್ಲ. ಸಹೋದರ ಮಾತ್ರ ಮನೆಯಲ್ಲಿದ್ದ. ರಾತ್ರಿ ಊಟ ಮಾಡಿ ಕೊಠಡಿಗೆ ತೆರಳಿದ ಸುಷ್ಮಿತಾ, ವಾಟ್ಸ್​ಆಪ್​ನಲ್ಲಿ ಡೆತ್​ನೋಟ್ ಬರೆದು ತಾಯಿ ಹಾಗೂ ಸಹೋದರನಿಗೆ ಕಳುಹಿಸಿ ಕೊಠಡಿಯಲ್ಲಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರುದಿನ ಬೆಳಗ್ಗೆ 7 ಗಂಟೆಗೆ ಊರಿನಿಂದ ವಾಪಸ್ ಆದಾಗ, ಸುಷ್ಮಿತಾ ಮಲಗಿದ್ದ ಕೊಠಡಿಯ ಬಾಗಿಲು ತೆಗೆಯದೇ ಇದ್ದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪತಿ ಶರತ್, ಆತನ ದೊಡ್ಡಮ್ಮ ವೈದೇಹಿ ಹಾಗೂ ನಾದಿನಿ ಗೀತಾ ಕಿರುಕುಳದಿಂದ ಬೇಸತ್ತು ಈ ರೀತಿ ಮಾಡಿಕೊಳ್ಳುತ್ತಿರುವುದಾಗಿ ಸುಷ್ಮಿತಾ ಡೆತ್​ನೋಟ್​ನಲ್ಲಿ ವಿವರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net